ನಿಗೂಢವಾಗಿ ವಿವಿಧ ಪಕ್ಷಿಗಳ ಸಾವು - ಬೆಂಗಳೂರು ಪ್ರಯೋಗಾಲಯಕ್ಕೆ ಮೃತದೇಹ ರವಾನೆ

26mnv01
ಮಾನ್ವಿ ಚೀಕಲಪರ್ವಿ ರಸ್ತೆಯ ನಿವಾಸಿ ಮಕ್ಸೂದ್ ಅವರ ಕೈತೋಟದಲ್ಲಿ ಸಾವಿಗೀಡಾದ ಕಾಗೆ ಮೃತದೇಹಗಳನ್ನು ಪಶು ಇಲಾಖೆ ವೈದ್ಯರು ಸಂಗ್ರಹಿಸಿದರು. ಪಶುವೈದ್ಯಾಧಿಕಾರಿ ಡಾ.ಅಭಿಷೇಕ, ಸಿಬ್ಬಂದಿ ಕುಮಾರ, ರೈತ ಮಕ್ಸೂದ್ ಇದ್ದರು.
Published on

ಮಾನ್ವಿ: ಪಟ್ಟಣದ ಹೊರವಲಯದ ಚೀಕಲಪರ್ವಿ ರಸ್ತೆಯ ತೋಟದಲ್ಲಿ ವಿವಿಧ ತಳಿಯ ಪಕ್ಷಿಗಳು ನಿಗೂಢವಾಗಿ ಸಾಯುತ್ತಿರುವ ಹಿನ್ನೆಲೆ ತಾಲೂಕು ಪಶು ಇಲಾಖೆ ತಂಡ ಮಂಗಳವಾರ ಪರಿಶೀಲನೆ ನಡೆಸಿತು.

ತಂಡದ ನೇತೃತ್ವ ವಹಿಸಿದ ಆಡಳಿತ ವಿಭಾಗದ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಬಸವರಾಜ ಹಿರೇಮಠ ಮಾತನಾಡಿ, ಸಾವಿಗೀಡಾಗುತ್ತಿರುವ ಕಾಗೆ, ಕಿಂಗ್‌ಫಿಷರ್, ಬೆಳ್ಳಕ್ಕಿ, ಪಾರಿವಾಳ ಸೇರಿ ನಾನಾ ಪಕ್ಷಿಗಳ ಮೃತದೇಹ ಸಂಗ್ರಹಿಸಿ ಬೆಂಗಳೂರಿನ ಪಶು ವಿಜ್ಞಾನ ಪ್ರಯೋಗಾಲಯಕ್ಕೆ ಬುಧವಾರ ಕಳುಹಿಸಲಾಯಿತು. ಪ್ರಯೋಗಲಾಯದ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದರು.

ತೆಲಂಗಾಣ ಗಡಿಭಾಗದ ಜಿಲ್ಲೆಗಳಲ್ಲಿ ಹಕ್ಕಿಜ್ವರ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ಬಂದಿರುವುದರಿಂದ ಎರಡು ದಿನಗಳಲ್ಲಿ ತಾಲೂಕಿನ ಗಡಿಯಲ್ಲಿ ಚೆಕ್ ಪೋಸ್ಟ್ ಹಾಕಿ ಪರಿಶೀಲಿಸಲಾಗುತ್ತಿದೆ. ತಹಸೀಲ್ದಾರ್ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ಸಭೆ ನಡೆಸಿ ತಾಲೂಕಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುವುದು. ತಾಲೂಕಿನಲ್ಲಿರುವ ಕೋಳಿ ಸಾಕಣೆ ಕೇಂದ್ರಗಳಲ್ಲಿ ಕೋಳಿಗಳ ಅರೋಗ್ಯದ ಬಗ್ಗೆ ನಿಗಾವಹಿಸಲಾಗುತ್ತಿದ್ದು, ಸಾಕು ಪಕ್ಷಿಗಳು ಮೃತಪಟ್ಟಲ್ಲಿ ಸಂಬಂಧಸಿದ ಪಶು ಇಲಾಖೆಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ಅತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net