ಗುಣಮಟ್ಟದ ಸೇತುವೆ ಕಾಮಗಾರಿ ಕೈಗೊಳ್ಳಲು ಸೂಚನೆ

manvi Bridge Construction
ಮುಷ್ಟೂರು ಗ್ರಾಮದಲ್ಲಿ ಸೋಮವಾರ ಸೇತುವೆ ನಿರ್ಮಾಣ ಕಾಮಗಾರಿಗೆ ಸಚಿವ ಎನ್.ಎಸ್.ಬೋಸರಾಜು ಚಾಲನೆ ನೀಡಿದರು. ಶಾಸಕ ಹಂಪಯ್ಯನಾಯಕ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸಲೀಂಪಾಷ ಇದ್ದರು.
Published on

ಮಾನ್ವಿ: ತಾಲೂಕಿನ ಮುಷ್ಟೂರು ಹಳ್ಳದ ಸೇತುವೆ ಕಾಮಗಾರಿಗೆ ಸೋಮವಾರ ಸಚಿವ ಎನ್‌ಎಸ್ ಬೋಸರಾಜು ಭೂಮಿ ಪೂಜೆ ನೆರವೇರಿಸಿದರು.

ಮುಖ್ಯ ರಸ್ತೆ ನಿರ್ವಹಣೆ ಯೋಜನೆ ಅಡಿಯಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. 47 ಮೀಟರ್ ಉದ್ದವಿದ್ದು, ಸೇತುವೆಗೆ 54 ಪೈಪ್ ಅಳವಡಿಸುವುದರಿಂದ ಹೆಚ್ಚಿನ ದಿನ ಬಾಳಿಕೆ ಬರುವಂತೆ ಕಾಮಗಾರಿ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿಯನ್ನು ಗುಣಮಟ್ಟದಲ್ಲಿ ನಿರ್ಮಾಣ ಮಾಡಬೇಕು ಎಂದು ಲೊಕೋಪಯೋಗಿ ಇಲಾಖೆಯ ಅಭಿಯಂತರ ರಾಜಕುಮಾರ ತೊರವಿಗೆ ಸಚಿವ ಸೂಚಿಸಿದರು.

ಶಾಸಕ ಹಂಪಯ್ಯನಾಯಕ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸಲೀಂಪಾಷಾ, ಮುಖಂಡರಾದ ಶಾಂತಪ್ಪ, ಬಾಲಸ್ವಾಮಿ ಕೊಡ್ಲಿ, ಜಿ. ನಾಗರಾಜ, ಪರಶುರಾಮನಾಯಕ, ಭೀಮನಗೌಡ, ವಿಶ್ವನಾಥ, ಎಂ. ಚಂದ್ರಶೇಖರಗೌಡ, ಆಂಜಿನಯ್ಯ ನಾಯಕ, ಶಿವಲಿಂಗ, ತಹಸೀಲ್ದಾರ್ ರಾಜು ಪಿರಂಗಿ, ತಾಪಂ ಇಓ ಖಾಲೀದ್ ಅಹಮ್ಮದ್, ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net