

24ನೇ ವಾರ್ಡ್‌ನ ಸದಸ್ಯೆ ಅವಿರೋಧ ಆಯ್ಕೆ
ಮಾನ್ವಿ: ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ 24ನೇ ವಾರ್ಡ್‌ನ ಸದಸ್ಯೆ ರಶೀದಾಬೇಗಂ ಪುರಸಭೆ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಪರಶುರಾಮ ಘೋಷಿಸಿದರು.
ಈ ಮೊದಲು ಅಧ್ಯಕ್ಷೆಯಾಗಿದ್ದ ಸುಫೀಯಾಬೇಗಂ ರಾಜೀನಾಮೆ ಸಲ್ಲಿಸಿದರು. ತೆರವಾಗಿದ್ದ ಸ್ಥಾನಕ್ಕೆ ಕಾಂಗ್ರೆಸ್‌ನ ಸದಸ್ಯೆ ರಶೀದಾಬೇಗಂ ಒಬ್ಬರೆ ನಾಮಪತ್ರ ಸಲ್ಲಿಸಿದ್ದರು. ಒಟ್ಟು 27 ಸದಸ್ಯರಲ್ಲಿ ಕಾಂಗ್ರೆಸ್‌ನ 13 ಸದಸ್ಯರು, ಸಮಾಜವಾದಿ ಪಕ್ಷದ ನಾಲ್ವರು ಸದಸ್ಯರು ಮತ್ತು ಇಬ್ಬರು ಪಕ್ಷೇತರ ಸದಸ್ಯರು ಸೇರಿ ಒಟ್ಟು 19 ಸದಸ್ಯ ಬಲ ಹೊಂದಿದ್ದ ಕಾಂಗ್ರೆಸ್, ಸದಸ್ಯೆ ರಶೀದಾಬೇಗಂರನ್ನು ಅಧ್ಯಕ್ಷೆಯಾಗಿ ಆಯ್ಕೆಗೊಳಿಸಿತು.
ಈ ಸಂದರ್ಭ ಗ್ರೇಡ್-2 ತಹಸೀಲ್ದಾರ ಅಬ್ದುಲ್‌ವಾಹಿದ್, ಪುರಸಭೆ ಮುಖ್ಯಾಧಿಕಾರಿ ಜಗದೀಶ ಭಂಡಾರಿ, ಪುರಸಭೆ ಉಪಾಧ್ಯಕ್ಷ ಕೆ.ಶುಕಮುನಿ, ಸ್ಥಾಯಿಸಮಿತಿ ಅಧ್ಯಕ್ಷ ಶೇಖ್ ಫರೀದ್‌ಉಮ್ರಿ, ಸದಸ್ಯರಾದ ಲಕ್ಷ್ಮೀದೇವಿ ನಾಯಕ, ಸೂಫಿಯಾಬೇಗಂ, ಸಾಬೀರ್‌ಪಾಷಾ, ರೇವಣ ಸಿದ್ದಯ್ಯಸ್ವಾಮಿ, ಶರಣಬಸವ, ಬಸವರಾಜ ಭಜಂತ್ರಿ, ಹುಸೇನ್‌ಭಾಷಾ, ಸಂತೋಷಿ ಜಯಪ್ರಕಾಶ, ಮೀನಾಕ್ಷಿ ರಾಮಕೃಷ್ಣ, ಸೂರ್ಯಕುಮಾರಿ, ನೀಲಮ್ಮ, ಆಮ್ಜದ್‌ಖಾನ್, ವೆಂಕಟೇಶನಾಯಕ ಇತರರಿದ್ದರು.
ಸಂಭ್ರಮ: ಪುರಸಭೆಗೆ ಅಧ್ಯಕ್ಷೆಯಾಗಿ ಆಯ್ಕೆಯಾದ ರಶೀದಾಬೇಗಂಗೆ ಮಾಜಿ ಎಂಎಲ್ಸಿ ಎನ್.ಎಸ್.ಬೋಸರಾಜು, ಮಾಜಿ ಶಾಸಕ ಹಂಪಯ್ಯನಾಯಕ ಸನ್ಮಾನಿಸಿದರು. ಮುಖಂಡರಾದ ಶರಣಪ್ಪನಾಯಕ ಗುಡದಿನ್ನಿ, ರಾಜಾ ವಸಂತನಾಯಕ, ಸಲೀಂಪಾಷಾ, ಮಹಾಂತೇಶಸ್ವಾಮಿ ರೌಡೂರು, ಸಬ್ಜಲಿಸಾಬ್, ಸಮದಾನಿನಾಯ್ಕ, ಸೈಯದ್ ನಜೀರುದ್ದೀನ್‌ಖಾದ್ರಿ, ಎಸ್.ಎಸ್.ಪಾಷಾ (ಬಾಬುಲ್) ಎಂ.ಡಿ.ಮೋಹಿನ್‌ಖಾನ್, ಜಿಲಾನಿ ಖುರೇಶಿ, ಜಯಪ್ರಕಾಶ, ವೀರೇಶ, ಬಾಬು ಮೇಸ್ತ್ರಿ, ಇದಾಯತ್‌ನಾಯ್ಕ ಮತ್ತಿತರ ಮುಖಂಡರಿದ್ದರು.