ರೂ. 3.37 ಲಕ್ಷ ಉಳಿತಾಯ ಬಜೆಟ್

3mnv01
ಮಾನ್ವಿ ಪುರಸಭೆಯಲ್ಲಿ ಅಧ್ಯಕ್ಷೆ ರಶೀದಾ ಬೇಗಂ ಖಾಸಿಂಸಾಬ್, ಉಪಾಧ್ಯಕ್ಷೆ ಸಂತೋಷಿ ಜಯಪ್ರಕಾಶ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ ನಾಯಕ ಶುಕ್ರವಾರ ಬಜೆಟ್ ಪ್ರತಿ ಪ್ರದರ್ಶಿಸಿದರು. ಮುಖ್ಯಾಧಿಕಾರಿ ಗಂಗಾಧರ ಇದ್ದರು.
Published on

ಮಾನ್ವಿ: ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ರಶೀದಾಬೇಗಂ ಖಾಸಿಂಸಾಬ್ ಅಧ್ಯಕ್ಷತೆಯಲ್ಲಿ 2023-24ನೇ ಸಾಲಿನ ಆಯವ್ಯಯ ಸಭೆ ಶುಕ್ರವಾರ ನಡೆಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ ನಾಯಕ 3.37 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.


ಅಂದಾಜು ಆದಾಯದಲ್ಲಿ ಸಂಸದರ, ಶಾಸಕರ, ಎಂಎಲ್‌ಸಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನ, ಆಸ್ತಿ ತೆರಿಗೆ ಖಾತಾ ಪ್ರತಿಗಳು, ಎಸ್‌ಎಫ್‌ಸಿ, 15ನೇ ಹಣಕಾಸು, ವಿದ್ಯುತ್, ಕುಡಿವ ನೀರು, ವಾಣಿಜ್ಯ ಮಳಿಗೆಗಳು, ವೇತನ ಭತ್ಯೆ, ಜಾಹೀರಾತು ಸೇರಿ ಅಂದಾಜು ರಾಜಸ್ವ ಸ್ವೀಕೃತಿ 13.86 ಕೋಟಿ ರೂ., ಬಂಡವಾಳ ಸ್ವೀಕೃತಿ 6 ಕೋಟಿ ರೂ., ಅಸಾಮಾನ್ಯ ಸ್ವೀಕೃತಿ 5.15 ಕೋಟಿ ರೂ. ಸೇರಿ ಒಟ್ಟು 24.88 ಕೋಟಿ ರೂ. ಆಗಿದೆ.
ಅಂದಾಜು ವೆಚ್ಚದಲ್ಲಿ ಕಾಯಂ, ದಿನಗೂಲಿ, ಹೊರಗುತ್ತಿಗೆ ನೌಕರರ ವೇತನ, ಬಾಡಿಗೆ, ವಿಮೆ, ಮುದ್ರಣ, ಜಾಹೀರಾತು, ಪ್ರಚಾರ, ಕಟ್ಟಡಗಳ ದುರಸ್ತಿ ಹಾಗೂ ನಿರ್ವಹಣೆ, ರಸ್ತೆಗಳು, ಬೀದಿ ದೀಪಗಳು, ನೈರ್ಮಲ್ಯ ವಿಭಾಗ, ನೀರು ಸರಬರಾಜು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ದಿ, ಹಿಂದುಳಿದ ವರ್ಗಗಳ ಅಭಿವೃದ್ಧಿಯ ರಾಜಸ್ವ ಪಾವತಿ 13.43 ಕೋಟಿ ರೂ, ಬಂಡವಾಳ ಪಾವತಿ 6.40 ಕೋಟಿ ರೂ., ಅಸಾಮಾನ್ಯ ಪಾವತಿ 5.15 ಕೋಟಿ ರೂ. ಸೇರಿ ಒಟ್ಟು 24.84 ಕೋಟಿ ರೂ. ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net