

ಮಾನ್ವಿ: ಯುವಕರು ಆಯೋಜಿಸುವ ಕ್ರಿಕೆಟ್, ಕಬಡ್ಡಿ ಹಾಗೂ ಇತರ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ತಾಲೂಕಿನ ಹಿರೇಕೊಟ್ನೆಕಲ್-ಭೋಗಾವತಿ ಗ್ರಾಮದ ದೊಡ್ಡಬಸ್ಸಪಗೌಡರ ಮೈದಾನದಲ್ಲಿ ಗಜಾನನ ಗೆಳೆಯರ ಬಳಗದಿಂದ ಆಯೋಜಿಸಿದ್ದ ಹಿರೇಕೊಟ್ನೆಕಲ್ ಪ್ರೀಮಿಯರ್ ಲೀಗ್ ಸೀಸನ್-4 ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಂಗಳವಾರ ಮಾತನಾಡಿದರು. ಯುವ ಪೀಳಿಗೆ ವಿವಿಧ ರೀತಿಯ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದರು.
ಎಚ್‌ಕೆಪಿಎಲ್ ಸೀಸನ್ 4 ವಿಜೇತ ತಂಡ ಸುನಾಮಿ ಬಾಯ್ಸಗೆ ಶಾಸಕ ರಾಜಾ ವೆಂಕಟಪ್ಪ ನಾಯಕ 40 ಸಾವಿರ ರೂ.ಬಹುಮಾನ ಮತ್ತು ಟ್ರೋಪಿ ನೀಡಿದರು. ರನ್ನರ್ ಅಪ್ ತಂಡ ಅಡ್ವೊಕೇಟ್ಸ್ ಬಾಯ್ಸಗೆ ಭೋಗಾವತಿ ಗ್ರಾಪಂ ಅಧ್ಯಕ್ಷ ಶಿವಶಂಕ್ರಯ್ಯಸ್ವಾಮಿ ರಾಜಲದಿನ್ನಿ 20 ಸಾವಿರ ರೂ. ಮತ್ತು ಟ್ರೋಫಿ ಹಾಗೂ ತೃತೀಯ ಬಹುಮಾನ 10 ಸಾವಿರ ರೂಪಾಯಿಯನ್ನು ಬಸನಗೌಡ ಆಲ್ದಾಳ್ ನೀಡಿದರು.
ಜಿಪಂ ಮಾಜಿ ಅಧ್ಯಕ್ಷ ದೊಡ್ಡಬಸ್ಸಪ್ಪಗೌಡ, ಗ್ರಾಪಂ ಅಧ್ಯಕ್ಷ ಶಿವಶಂಕ್ರಯ್ಯಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ, ಪ್ರಮುಖರಾದ ಶಿವಪ್ಪಗೌಡ ಮಾಲಿ ಪಾಟೀಲ್, ಪಂಪನಗೌಡ, ಮೌಲಾಸಾಬ್, ಸದಸ್ಯರಾದ ಶಿವಾನಂದಸ್ವಾಮಿ, ಡಿ.ಅಮರೇಶನಾಯಕ, ಯಲ್ಲಪ್ಪ, ಶಿವಬಸನಗೌಡ ಭೋಗಾವತಿ, ಶೇಖರಪ್ಪ ಅಮರೇಶ್ವರ ಕ್ಯಾಂಪ್, ಚನ್ನಯ್ಯಸ್ವಾಮಿ, ಯಂಕೋಬ ಉಪ್ಪಾರ, ಹನುಮಂತಗೌಡ ಇತರರಿದ್ದರು.