ಸ್ವಚ್ಛತೆಗೆ ಆದ್ಯತೆ ನೀಡಿ; ಶಾಸಕ ರಾಜಾ ವೆಂಕಟಪ್ಪ ನಾಯಕ ಸಲಹೆ ಕೋಳಿ ಕ್ಯಾಂಪ್‌ಗೆ ಭೇಟಿ

14122022 manvi mla visit to koli camp
Published on

ಮಾನ್ವಿ: ಬಾಲಕಿಗೆ ಝೀಕಾ ವೈರಸ್ ದೃಢಪಟ್ಟಿರುವ ಬಗ್ಗೆ ಹೆದರುವ ಅವಶ್ಯವಿಲ್ಲ. ವೈದ್ಯರ ಸಲಹೆ ಪಡೆದು ಸೂಕ್ತ ಔಷಧ ಪಡೆಯುವಂತೆ ಕೋಳಿ ಕ್ಯಾಂಪ್‌ನ (ಸಣ್ಣಹಳ್ಳಿ) ಸೋಂಕಿತ ಬಾಲಕಿಯ ಕುಟುಂಬಸ್ಥರಿಗೆ ಶಾಸಕ ರಾಜಾ ವೆಂಕಟಪ್ಪನಾಯಕ ಸಲಹೆ ನೀಡಿದರು.

ಕೋಳಿಕ್ಯಾಂಪ್‌ಗೆ ಬುಧವಾರ ಭೇಟಿ ನೀಡಿ ಬಾಲಕಿಯ ಕುಟುಂಬಸ್ಥರೊಂದಿಗೆ ಮಾತನಾಡಿದರು. ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಂಡು ಬ್ಲೀಚಿಂಗ್ ಪೌಡರ್ ಸಿಂಪಡಣೆ ಹಾಗೂ ಫಾಗಿಂಗ್ ಮಾಡಲಾಗಿದೆ. ಇನ್ನೂ ಕೆಲ ದಿನ ವೈದ್ಯರ ತಂಡವನ್ನು ಗ್ರಾಮಕ್ಕೆ ಕಳುಹಿಸಿ ಬಾಲಕಿ ಹಾಗೂ ಕುಟುಂಬಸ್ಥರ ಆರೋಗ್ಯ ವಿಚಾರಿಸುವಂತೆ ತಾಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರಯ್ಯಸ್ವಾಮಿಗೆ ಸೂಚಿಸಿದರು.

ರಾಜ್ಯದಲ್ಲೇ ಮೊದಲ ಪ್ರಕರಣವಾಗಿದ್ದರಿಂದ ಝೀಕಾ ವೈರಸ್ ಬಗ್ಗೆ ಸರ್ಕಾರ ಗಂಭಿರವಾಗಿ ಪರಿಗಣಿಸಿದೆ. ಜನರು ಪ್ರತಿದಿನ ಕಾಯಿಸಿ ಆರಿಸಿದ ನೀರನ್ನು ಸೇವಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸುತ್ತಮುತ್ತಲಿನ ಹಳ್ಳಿಗಳ ಸರ್ವೇ ಕಾರ್ಯ ಮಾಡಿ ಜನರಿಗೆ ಸೂಕ್ತ ಸಲಹೆಗಳನ್ನು ನೀಡುವಂತೆ ಟಿಎಚ್‌ಒಗೆ ಶಾಸಕ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net