ಕ್ರೀಡೆಗಳಲ್ಲಿ ಸೋಲು-ಗೆಲುವು ಸಹಜ; ಶಾಸಕ ರಾಜಾ ವೆಂಕಟಪ್ಪ ನಾಯಕ ಅಭಿಮತ

10012021 Manvi Cricet tornment start
Published on

ಎಂಪಿಎಲ್ ಟ್ರೋಫಿ ಪಂದ್ಯಾವಳಿಗೆ ಚಾಲನೆ


ಮಾನ್ವಿ: ಪ್ರತಿಯೊಂದು ಕ್ರೀಡೆಯಲ್ಲೂ ಸೋಲು-ಗೆಲುವು ಸಹಜವಾಗಿದ್ದು, ಸೋತವರು ನಿರಾಸೆಯಾಗದೆ, ಮುಂದಿನ ಪಂದ್ಯಗಳಲ್ಲಿ ಗೆಲ್ಲುವ ಛಲ ಹೊಂದಿರಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕರ ಕಾಲೇಜು ಮೈದಾನದಲ್ಲಿ ಭಾನುವಾರ ಎಂಪಿಎಲ್ ಟ್ರೋಫಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಮಾನಸಿಕ, ಭೌದ್ಧಿಕವಾಗಿ ಸದೃಢರಾಗಲು ಕ್ರೀಡೆಗಳು ಅವಶ್ಯ. ಎಂಪಿಎಲ್ ಟ್ರೋಫಿ ಕ್ರಿಕೆಟ್ ಟೂರ್ನಾಮೆಂಟ್‌ನಲ್ಲಿ ಭಾಗವಹಿಸುವ ಎಲ್ಲ ತಂಡಗಳು ಸೌಹಾರ್ದದಿಂದ ಆಡಬೇಕು. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಟ್ರೋಫಿಯಲ್ಲಿ ಗೆಲುವು ಸಾಧಿಸಿದ ತಂಡಕ್ಕೆ ನನ್ನ ಕಡೆಯಿಂದ ಪ್ರಥಮ ಬಹುಮಾನ, ವಿ.ಕೆ.ಗ್ರೂಪ್‌ನಂದ ದ್ವಿತೀಯ ಬಹುಮಾನ ಹಾಗೂ ವಿವಿಧ ಕ್ರಿಕೆಟ್ ಪ್ರೇಮಿಗಳಿಂದ ಬಹುಮಾನ ಘೋಷಣೆ ಮಾಡಲಾಗಿದೆ. ಕ್ರೀಡಾಕೂಟ ಆಯೋಜಿಸಲು ಅನುಕೂಲವಾಗಲು 4 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದರು.

ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಮುಖಂಡರಾದ ಮಹ್ಮದ್ ಇಸ್ಮಾಯಿಲ್, ಶ್ರೀಧರಸ್ವಾಮಿ, ಖಲೀಲ್ ಖುರೇಷಿ, ಏಜಾಸ್‌ಖಾದ್ರಿ, ಶರಣಪ್ಪ ಮೇದಾ, ದೇವರಾಜ್, ರಾಜಾ ಶಾಂಸುಂದರ ನಾಯಕ, ಅಶೋಕಚಂದ, ಶ್ರೀಕಾಂತ್, ಶ್ರೀನಿವಾಸ್ ನಾಯಕ, ನಾಗರಾಜ, ಮಲ್ಲು ಅರ್ಜುನ್, ಚಾಂದ್‌ಪಾಷಾ, ಸಂತೋಷ ಕುಮಾರ, ಸೈಯದ್ ಸಾಜಿದ್‌ಪಾಷಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net