

ಮಾನ್ವಿ: ಪಟ್ಟಣದ ನಮಾಜಗೇರಿ ಗುಡ್ಡ ಮತ್ತು ಇಂದಿರಾ ನಗರದಲ್ಲಿ ನಮ್ಮ ಕ್ಲಿನಿಕ್ ಆಸ್ಪತ್ರೆಗಳು ಆರಂಭವಾಗಿದ್ದು, ರೋಗಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕಾ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ನಮಾಜಗೇರಿ ಗುಡ್ಡ ನಮ್ಮ ಕ್ಲಿನಿಕ್‌ಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ ದೂರದೃಷ್ಟಿಯಿಂದ ನಮ್ಮ ಕ್ಲಿನಿಕ್ ಆರಂಭಿಸಿದ್ದಾರೆ. ಸಿರವಾರದಲ್ಲಿ ಒಂದು ನಮ್ಮ ಕ್ಲಿನಿಕ್ ಉದ್ಘಾಟಿಸಲಾಗಿದೆ. ಬಡ ರೋಗಿಗಳಿಗೆ ನಮ್ಮ ಕ್ಲಿನಿಕ್‌ಗಳಿಂದ ಅನುಕೂಲವಾಗಲಿದೆ ಎಂದರು.