ಸಮ ಸಮಾಜ ನಿರ್ಮಾಣ

Untitled design (2)
Published on

ಮಾನ್ವಿ: ಸಮಾಜದಲ್ಲಿನ ಜಾತಿ ಭೇದಗಳನ್ನು ಹೋಗಲಾಡಿಸಲು ಸಮಾನತೆ ತತ್ವಗಳನ್ನು ನೀಡಿದ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.

ಪಟ್ಟಣದ ಬಸವ ವೃತ್ತದಲ್ಲಿ ಬುಧವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಸಮ ಸಮಾಜ ನಿರ್ಮಾಣ ಮಾಡಿ ಅನುಭವ ಮಂಟಪದ ಮೂಲಕ ಎಲ್ಲ ಸಮುದಾಯದವರನ್ನು ವಚನಕಾರರನ್ನಾಗಿ ಮಾಡಿ ಸಮಾನತೆ ತತ್ವ ನೀಡಿದರು ಎಂದರು.

ಬಸವಣ್ಣನವರು ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಮಾಡಿದ ಶರಣರಲ್ಲಿ ಆಗ್ರಗಣ್ಯರು. ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಅರಿವಿನ ಕಿರಣಗಳನ್ನು ಬೀರಿದರು. ವಿಶ್ವಗುರು ಬಸವಣ್ಣವರ ಒಂದೊಂದು ವಚನಗಳು ಎಲ್ಲರ ಬದುಕಿಗೆ ಆದರ್ಶ, ಸ್ಫೂರ್ತಿ ಎಂದು ತಿಳಿಸಿದರು.

ಬಸವ ಕೇಂದ್ರದಿಂದ ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸಲಾಯಿತು. ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ, ಪುರಸಭೆ ಅಧ್ಯಕ್ಷೆ ಲಕ್ಷ್ಮೀ ವೀರೇಶ, ತಹಸೀಲ್ದಾರ್ ಭೀಮರಾಯ್ ರಾಮಸಮುದ್ರ, ಬಸವ ಕೇಂದ್ರದ ಗೌರವಾಧ್ಯಕ್ಷ ಡಾ. ಬಸವಪ್ರಭು ಪಾಟೀಲ್, ಅಧ್ಯಕ್ಷ ಎಂ. ರಂಗಪ್ಪ, ಅರುಣಚಂದ, ಹರಿಹರ ಪಾಟೀಲ್, ಶರಣಪ್ಪಗೌಡ ನಕ್ಕುಂದಿ, ತಿಮ್ಮರಡ್ಡಿಗೌಡ ಭೋಗಾವತಿ, ಮಹ್ಮದ್ ಮುಜಿಬ್, ಮಲ್ಲಿಕಾರ್ಜುನಗೌಡ ಚಿಮ್ಲಾಪುರ, ಗುಮ್ಮ ಬಸವರಾಜ ವಕೀಲರು, ರಾಜಾ ಸುಭಾಷನಾಯಕ, ದೇವೇಂದ್ರ ದುರ್ಗದ್, ಅಮರೇಶಪ್ಪ ಅಲ್ದಾಳ, ನಾಗರಾಜ ಬಳಿಗಾರ, ಡಿಜಿ ಕರ್ಕಿಹಳ್ಳಿ, ಚನ್ನಬಸವ ಬೆಟ್ಟದೂರು, ಶ್ರೀಧರಸ್ವಾಮಿ, ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net