

ಮಾನ್ವಿ: ತಾಲೂಕು ಆಡಳಿತ ಭವನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಬೇಕು ಎಂದು ಕನಾಟಕ ಗೃಹ ಮಂಡಳಿ ಬಳ್ಳಾರಿ ವೃತ್ತದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ತುಜೇಂದ್ರ ಪಟೇಲ್‌ಗೆ ಶಾಸಕ ಹಂಪಯ್ಯನಾಯಕ ಸೂಚಿಸಿದರು. ಪಟ್ಟಣದ ನೀರಾವರಿ ಇಲಾಖೆ ಆವರಣದಲ್ಲಿ ಉದ್ದೇಶಿತ ತಾಲೂಕು ಆಡಳಿತ ಭವನ ನಿರ್ಮಾಣ ಅಂಗವಾಗಿ ಕಟ್ಟಡಗಳ ತೆರವು ಕಾರ್ಯಚಾರಣೆ ವೀಕ್ಷಿಸಿ ಗುರುವಾರ ಮಾತನಾಡಿದರು. ಕೂಡಲೇ ಕಾಮಗಾರಿ ಆರಂಭಿಸಿ ನಿಗದಿತ ಸಮಯದಲ್ಲಿ ಮುಗಿಸಬೇಕು ಎಂದು ತಾಕೀತು ಮಾಡಿದರು.