

ಮಾನ್ವಿ: ನನ್ನ ಮತ್ತು ಸಚಿವ ಡಾ.ಶರಣಪ್ರಕಾಶ ಪಾಟೀಲ್ ನಡುವೆ ಸಿಎಲ್‌ಪಿ ಸಭೆಯಲ್ಲಿ ಯಾವುದೇ ಗಲಾಟೆಯಾಗಿಲ್ಲ. ಈ ವಿಚಾರ ಒಳ್ಳೆಯರು ಯಾರು ಹೇಳಿಲ್ಲ. ಯಾರೋ ಕಳ್ಳರು ಹೇಳಿರಬೇಕು ಎಂದು ಸಚಿವ ಎನ್.ಎಸ್.ಬೋಸರಾಜು ಕಟುವಾಗಿ ಪ್ರತಿಕ್ರಿಯಿಸಿದರು.
ನಾವು ಒಟ್ಟಿಗಿದ್ದೇವೆ. ಏನೂ ಆಗಿಲ್ಲ. ಹೊರಗೆ ಬಂದು ಸುಮ್ಮನೆ ಮಾತನಾಡಿದರೆ ಒಳಗೆ ನಡೆದಿರುವುದು ಹೇಗೆ ಗೊತ್ತಾಯ್ತು ಎಂದು ಪ್ರಶ್ನೆ ಮಾಡಿದರು. ವರ್ಗಾವಣೆ ವಿಚಾರಕ್ಕೆ ನಾವೇನು ತಲೆಕೆಡಿಸಿಕೊಂಡಿಲ್ಲ. ಸೇಡಂನಲ್ಲಿ ಕಾರ್ಯಕ್ರಮ ನಿಗದಿ ಆಗಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಆರೋಗ್ಯ ಮೇಳಕ್ಕೆ ಬಂದಿಲ್ಲ ಎಂದರು.