

ಮಾನ್ವಿ: ಮಳೆಯಿಂದ ಬೆಳೆ ಹಾನಿಗೀಡಾಗಿ ನಷ್ಟದಲ್ಲಿರುವ ರೈತರಿಗೆ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಭರವಸೆ ನೀಡಿದರು.
ಸಿರವಾರ ತಾಲೂಕಿನ ನವಲಕಲ್, ಕುರಕುಂದಾ, ವಡವಾಟಿ ಸೀಮಾದಲ್ಲಿ ಹಾನಿಗೀಡಾದ ಹತ್ತಿ ಬೆಳೆ ಪರಿಶೀಲಿಸಿ ಮಾತನಾಡಿದರು. ನಿರಂತರ ಮಳೆಯಿಂದ ಬೆಳೆ ಹಾನಿಯಾಗಿವೆ.
ರಾಜ್ಯ ಸರ್ಕಾರ ರೈತರ ಪರ ಇದ್ದು, ಬೆಳೆಹಾನಿ ಪ್ರದೇಶವನ್ನು ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಈಗಾಗಲೇ ಸರ್ವೇ ಆರಂಭಿಸಿದ್ದಾರೆ. ಅಧಿಕಾರಿಗಳು ಬೆಳೆ ನಷ್ಟದ ಕುರಿತು ವರದಿ ಸಿದ್ಧಪಡಿಸಲಿದ್ದಾರೆ. ರೈತರಿಗೆ ಅನ್ಯಾಯವಾಗದಂತೆ ವರದಿ ಅನುಸಾರ ಸರ್ಕಾರ ಪರಿಹಾರ ನೀಡಲಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಚುಕ್ಕಿ ಸೂಗಪ್ಪ, ಶರಣಯ್ಯ ನಾಯಕ, ಕೆ.ಶಾಂತಪ್ಪ, ಮೌನೇಶ್ ಹೀರಾ, ಶಿವಮೂರ್ತಿ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಬಸವರಾಜ ಪಾಟೀಲ್, ಚುಕ್ಕಿ ಶಿವಕುಮಾರ, ನಾಗಪ್ಪ ನವಲಕಲ್, ದೇವೇಂದ್ರಪ್ಪ, ಮಲ್ಲಿಕಾರ್ಜುನ್ ಮಲ್ಲಟ, ಶಿವಪ್ಪ ಗೊಲ್ಲದಿನ್ನಿ, ಮಲ್ಲಪ್ಪ ಇತರರಿದ್ದರು.