

ಮಾನ್ವಿ: ಪಟ್ಟಣದ ಖಾದ್ರಿ ಇಂಪಿರೀಯಲ್ ಗಾರ್ಡನ್ ಅವರಣದಲ್ಲಿ ಸೆ.28 ರಂದು ಬೆಳಗ್ಗೆ 9 ಗಂಟೆಗೆ ಸರ್ವ ಮುಸ್ಲಿಂ ಧಾರ್ಮಿಕ ಸಂಘಟನೆಗಳ ವೇದಿಕೆಯಿಂದ ಪ್ರವಾದಿ ಮುಹಮ್ಮದ್(ಸ) ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುಸ್ಲಿಂ ಧರ್ಮಗುರು ಮೌಲಾನ ಮುಫ್ತಿ ಸೈಯದ್ ಹಸನ್ ಜಿಶಾನ್ ಖಾದ್ರಿ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠೀಯಲ್ಲಿ ಶುಕ್ರವಾರ ಮಾತನಾಡಿ, ಪ್ರವಾದಿಗಳ ಸಂದೇಶ ಮಾನವ ಕುಲಕ್ಕೆ ಹೆಸರಿನಲ್ಲಿ ವಿಭಾಗೀಯ ಮಟ್ಟದ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕಲಬುರಗಿ ಖ್ವಾಜಾ ಬಂದೇ ನವಾಜ್ ದರ್ಗಾದ ಪೀಠಾಧಿಪತಿ ಸಜ್ಜದ ನಶೀನ್ ಅಲ್ಹಾಜ್ ಹಫೀಜ್ ಸೈಯದ್ ಅಲಿಯುಲ್ ಹುಸೇನಿ ಸಾಹೇಬ್, ಮಹಾರಾಷ್ಟ್ರದ ನೀಲಂಗ ಶರೀಫ್ ದರ್ಗಾದ ಸಜ್ಜದ ನಶಿನ್ ಹಜರತ್ ಸೈಯದ್ ಹೈದರ್ ಒಲಿಯುಲ್ಲ ಖಾದರಿ ಸಾಹೇಬ್, ಹೈದರಾಬಾದ್ ಅರೇಬಿಕ್ ವಿಶ್ವವಿದ್ಯಾಲಯ ಜಾಮಿಯಾ ನಿಜಾಮಿಯಾದ ಉಪಕುಲಪತಿ ಭಾಗವಹಿಸಲಿದ್ದಾರೆ ಎಂದರು.
ರಾಜ್ಯಸಭಾ ಮಾಜಿ ಸದಸ್ಯ ಮೌಲಾನಾ ಉಬೇದುಲ್ಲಾ ಖಾನ್ ಆಜ್ಮಿ, ಉತ್ತರ ಪ್ರದೇಶದ ದಾರುಲ್ ಉಲೂಮ್ ದೇವಬಂದ್ ವಿವಿ ಉಪಕುಲಪತಿ ಮೌಲಾನಾ ಮುಫ್ತಿ ಸಲ್ಮಾನ್ ಬಿಜುನೂರಿ, ಧರ್ಮ ಗುರು ಮೌಲಾನಾ ಮಕ್ಸೂದ್ ಇಮ್ರಾನ್ ಖಾಸ್ಮಿ, ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮೌಲಾನಾ ಅಬ್ದುಲ್ ಗಫಾರ್ ಹಮೀದ್ ಉಮರಿ ಆಗಮಿಸಲಿದ್ದಾರೆ ಎಂದು ಮೌಲಾನ ಮುಫ್ತಿ ಸೈಯದ್ ಹಸನ್ ಜಿಶಾನ್ ಖಾದ್ರಿ ತಿಳಿಸಿದರು.
ರಾಬಿತಯೇ ಮಿಲ್ಲತ್ ಅಧ್ಯಕ್ಷ ಸೈಯದ್ ಅಕ್ಬರ್ ಪಾಷಾ, ಸೈಯದ್ ನಜೀರುದ್ದೀನ್ ಖಾದ್ರಿ, ಮಹಮ್ಮದ್ ಸಾಬೀರ್, ಮಹಮ್ಮದ್ ಹುಸೇನ್, ಜಮಾತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್, ಸೈಯದ್ ಖಾಲಿದ್ ಖಾದ್ರಿ ಗುರು, ಸೈಯದ್ ಮುಜ್ತಬಾ ಖಾದ್ರಿ ಗುರು, ಅಬ್ದುಲ್ ಕರೀಂಖಾನ್, ಚಾಂದ್ ಪಾಷಾ, ಹಫೀಜ್ ಸಿಕಂದರ್‌ಸಾಬ್, ಯೂಸುಫ್ ಖಾನ್ ಇದ್ದರು.