4ನೇ ಉಪಕಾಲುವೆಗೆ ಸಮಪರ್ಕ ನೀರು ಹರಿಸಿ

PROTEST
4ನೇ ಉಪ ಕಾಲುವೆ ಕೆಳ ಭಾಗಕ್ಕೆ ಸಮರ್ಪಕ ನೀರು ಹರಿಸವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಂಡರು ಹಿರೇಕೊಟ್ನೆಕಲ್ ನೀರಾವರಿ ಇಲಾಖೆ ಮುಂದೆ ಗುರುವಾರ ಧರಣಿ ನಡೆಸಿದರು. ಸಂಘದ ಜಿಲ್ಲಾಧ್ಯಕ್ಷೆ ಅನಿತಾ ಮಂತ್ರಿ, ಕೆ.ವೈ. ಬಸವರಾಜ ನಾಯಕ, ಶಾಮಸಿಂಗ್ ರಾಜಪೂತ್ ಇತರರಿದ್ದರು.
Published on

ಮಾನ್ವಿ: ತಾಲೂಕಿನ ಹಿರೇಕೊಟ್ನೆಕಲ್ ವ್ಯಾಪ್ತಿಯ 4ನೇ ಉಪಕಾಲುವೆ ಕೆಳ ಭಾಗಕ್ಕೆ ಸಮರ್ಪಕ ನೀರು ಹರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಹಿರೇಕೋಟ್ನೆಕಲ್ ಗ್ರಾಮದ ನೀರಾವರಿ ಇಲಾಖೆ ಮುಂದೆ ಗುರುವಾರ ಧರಣಿ ನಡೆಸಲಾಯಿತು.

ಸಂಘದ ಜಿಲ್ಲಾಧ್ಯಕ್ಷೆ ಅನಿತಾ ಮಂತ್ರಿ ಮಾತನಾಡಿ, 4ನೇ ಉಪಕಾಲುವೆಗೆ ನೀರು ಬಾರದೆ ಈ ಭಾಗದ ರೈತರು ಬೆಳೆದ ಬೆಳೆಗಳು ಬಾಡುತ್ತಿವೆ. ವಿತರಣಾ ಕಾಲುವೆ 76/5 ಮತ್ತು 76/6 ಮೂಲಕ ವಂತಿನ ಪ್ರಕಾರ 72 ಮತ್ತು 70 ಕ್ಯೂಸೆಕ್ ನೀರನ್ನು ಕೂಡಲೇ ಹರಿಸಬೇಕೆಂದು ನೀರಾವರಿ ಇಲಾಖೆ ಅಧಿಕಾರಿ ಎಇಇ ತಿಮ್ಮಣ್ಣ ಅವರನ್ನು ಒತ್ತಾಯಿಸಿದರು.

ಕಾಲುವೆ ವ್ಯಾಪ್ತಿಯ ಜೀನೂರು, ಪೋತ್ನಾಳ್, ಮುದ್ದಂಗುಡಿ, ಖರಾಬ್‌ದಿನ್ನಿ, ಈರಲಗಡ್ಡಿ, ಮುಷ್ಟೂರು, ಹಿರೇಕೋಟ್ನೆಕಲ್, ರಾಜಲದಿನ್ನಿ, ನಂದಿಹಾಳ್, ಅಮರಾವತಿ, ಭೋಗವಾತಿ ಗ್ರಾಮಗಳ ರೈತರು ಹತ್ತಿ, ಭತ್ತ, ಮೆಣಸಿನಕಾಯಿ ಇತರ ಬೆಳಗಳನ್ನು ಬೆಳೆದಿದ್ದು ನೀರಿಲ್ಲದೆ ಒಣಗಲಾರಂಭಿಸಿವೆ. ಶೀಘ್ರವೇ ಕಾಲುವೆ ಕೆಳ ಭಾಗಕ್ಕೆ ಸಮರ್ಪಕ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ನೀರಾವರಿ ಇಲಾಖೆ ಎಇಇ ವಿಜಯಲಕ್ಷ್ಮೀ, ರೈತ ಸಂಘದ ಮುಖಂಡರಾದ ಕೆ.ವೈ. ಬಸವರಾಜ ನಾಯಕ, ಶಾಮಸಿಂಗ್ ರಾಜಪೂತ್, ವಿರೇಶನಾಯಕ, ವೀರಭದ್ರಪ್ಪಗೌಡ, ಶಿವರಾಜ, ಮಠದಪ್ಪ, ಹನುಮೇಶ, ಬುಡ್ಡಪ್ಪನಾಯಕ, ವೆಂಕಟರಾವ್ ಹಾಗೂ ನೂರಾರು ರೈತರು ಧರಣಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net