

ಮಾನ್ವಿ: ತಾಲೂಕಿನ ನೀರಮಾನ್ವಿ ಗುಡ್ಡದಲ್ಲಿ ಕಾಣಿಸಿಕೊಂಡಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿ ರಾಜೇಶ ನಾಯಕ ನೇತೃತ್ವದ ತಂಡ ಗುಡ್ಡದಲ್ಲೇ 2-3 ದಿಗನಳಿಂದ ಠಿಕಾಣಿ ಹೂಡಿದೆ. ಗುಡ್ಡದಲ್ಲಿ ಶೆಡ್ ನಿರ್ಮಿಸಿ ಅಡುಗೆ ಮಾಡಿಕೊಳ್ಳಲಾಗುತ್ತಿದೆ. ಈ ಮೂಲಕ ರಾತ್ರಿ ಗಸ್ತು ತಿರುಗಲಾಗುತ್ತಿದೆ.
ಚಿರತೆ ಹಿಡಿಯಲು ಅರಣ್ಯ ಇಲಾಖೆ ಎರಡು ಬೋನು ಇರಿಸಿದೆ. ಚಿರತೆ ಚಲನವಲನ ತಿಳಿಯಲು ಕ್ಯಾಮರಾ ಅಳವಡಿಸಿದೆ. ಆದರೆ ಚಿರತೆ ಮಾತ್ರ ಅಧಿಕಾರಿಗಳ ಕಣ್ಣಿಗೆ ಕಾಣದೆ ಜಾಣತನ ಮೆರೆಯುತ್ತಿದೆ. ಒಂದು ವಾರದ ಹಿಂದೆ ಗ್ರಾಮದ ಯುವಕರು ಗುಡ್ಡಕ್ಕೆ ಹೋಗಿ ದೂರದಿಂದ ಮೊಬೈಲ್‌ನಲ್ಲಿ ಚಿರತೆಯ ಚಲನ ವಲಗಳನ್ನು ಸೆರೆ ಹಿಡಿದು ಅಧಿಕಾರಿಗಳಿಗೆ ತೋರಿಸಿದ್ದರು. ಆದರೆ ಸಿಸಿ ಕ್ಯಾಮರಾದಲ್ಲಿ ಒಮ್ಮೆಯೂ ಚಿರತೆಯ ಚಲನವಲನ ಸೆರೆಯಾಗಿಲ್ಲ. ಅರಣ್ಯ ಸಿಬ್ಬಂದಿ ಬೂದೆಪ್ಪ, ಮುನಿಸ್ವಾಮಿ, ಆಜೀಂ ಪಾಷ, ಆದೆಪ್ಪ, ಶಬ್ಬೀರ್, ಯಲ್ಲಪ್ಪ, ಪಕ್ಷಿಪ್ರೇಮಿ ಸಲ್ಲಾವುದ್ದೀನ್ ಹಾಗೂ ಜಗನ್ನಾಥ ಚೌಧರಿ ಇದ್ದರು.