ಫಲಾನುಭವಿಗಳ ವಶಕ್ಕೆ ಜಮೀನು ನೀಡಿ

23mnv02
????????????????????????????????????
Published on

ಮಾನ್ವಿ: ಭೂಒಡೆತನ ಯೋಜನೆಯಡಿ ಫಲಾನುಭವಿಗಳಿಗೆ ಮಂಜೂರಾಗಿರುವ ಹಿರೇಕೊಟ್ನೆಕಲ್ ಹೋಬಳಿಯ ತಡಕಲ್ ಸೀಮಾದ ಸರ್ವೇ ನಂ. 119 ಮತ್ತು 120 ಜಮೀನಿನ ಫಲಾನುಭವಿಗಳ ವಶಕ್ಕೆ ನೀಡಬೇಕೆಂದು ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಸಿಪಿಐ (ಎಂಎಲ್) ತಾಲೂಕು ಸಮಿತಿಯಿಂದ ಸೋಮವಾರ ಮನವಿ ಸಲ್ಲಿಸಲಾಯಿತು.

ಭೂರಹಿತ ಫಲಾನುಭವಿಗಳ ಹೆಸರಿಗೆ ನೋಂದಣೆ ಮಾಡಿ ಪಹಣಿಯಲ್ಲಿ ಹೆಸರು ಬಂದಿದ್ದರೂ ಫಲಾನುಭವಿಗಳ ಕಬ್ಜಾಕ್ಕೆ ಜಮೀನು ನೀಡಿಲ್ಲ. ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪ್ರಮುಖರಾದ ಪ್ರಕಾಶ ತಡಕಲ್, ಗುಂಡಪ್ಪ, ಮಲ್ಲನಗೌಡ, ರವಿ, ಮರಿಸ್ವಾಮಿ, ಕರಿಬೀರಯ್ಯಸ್ವಾಮಿ, ಸುರೇಶ, ದೇವ ಪೋತ್ನಾಳ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net