

ಮಾನ್ವಿ: ಪಟ್ಟಣ ಹೊರವಲಯದ ರಬ್ಬಣಕಲ್ ಬಳಿ ಖಾಸಗಿ ಕೆರೆಯಲ್ಲಿ ಈಜಲು ಇಳಿದ ಯುವಕ ನೀರು ಪಾಲಾಗಿದ್ದಾನೆ. ಇಲ್ಲಿನ ಕೋನಾಪುರುಪೇಟೆಯ ನಾಗರಾಜ (24) ನೀರು ಪಾಲಾದ ಯುವಕ.
ಗೆಳೆಯರೊಂದಿಗೆ ಕೆರೆಯಲ್ಲಿ ಸ್ನಾನ ಮಾಡಲು ಹೋದಾಗ ನಾಗರಾಜ ಕೆರೆಯ ಕೆಸರಲ್ಲಿ ಸಿಲುಕೊಂಡಿದ್ದಾರೆ. ಗಾಬರಿಗೊಂಡ ಉಳಿದ ನಾಲ್ವರು ಯುವಕರು ದಡ ಸೇರಿದ್ದಾರೆ. ಆದರೆ, ನಾಗರಾಜ ಮಾತ್ರ ಮೇಲೆ ಬಾರದೇ ಮುಳುಗಿದ್ದಾರೆ. ಸ್ನೇಹಿತರು ಸ್ಥಳೀಯರಿಗೆ ತಿಳಿಸಿದ್ದು, ಸ್ಥಳಕ್ಕೆ ಆಗ್ನಿ ಶಾಮಕದಳ ಬಂದು ಕೆರೆಯಲ್ಲಿ ಇಳಿದು ಹುಡುಕಾಟ ನಡೆಸಿದ್ದಾರೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.