

ಮಾನ್ವಿ: ಕರೊನಾ ವೈರಸ್‌ನಿಂದ ತೊಂದರೆಗೀಡಾದ ಗ್ರಾಮೀಣ ಪ್ರದೇಶದ ಬಡ ಜನರಿಗೆ ದೇವದುರ್ಗ ಶಾಸಕ ಶಿವನಗೌಡ ನಾಯಕ ನಿತ್ಯ ಅನ್ನದಾಸೋಹ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಪಟ್ಟಣದ ಧ್ಯಾನಮಂದಿರದಲ್ಲಿ ಕೆವಿಎನ್ ಅನ್ನದಾಸೋಹ ಕಾರ್ಯಕ್ರಮ ಸೋಮವಾರ ಉದ್ಘಾಟಿಸಿ ಮಾತನಾಡಿದರು. ದೇವದುರ್ಗ, ಮಾನ್ವಿ ಮತ್ತು ಸಿರವಾರ ತಾಲೂಕಿನಲ್ಲಿ ಅಗತ್ಯ ಜನರಿಗೆ ಸೇರಿದಂತೆ ವಾರಿಯರ್ಸ್‌ಗೆ 1.36 ಲಕ್ಷ ಅನ್ನದಾಸೋಹದ ಪಾಕೇಟ್‌ಗಳು ಮತ್ತು 3 ಲಕ್ಷ ಮಾಸ್ಕ್‌ಗಳು ವಿತರಿಸಲು ಕೆವಿಎಸ್ ತಂಡ ಮುಂದಾಗಿದೆ ಎಂದರು. ಕಳೆದ ಬಾರಿಯ ಕರೊನಾ ಸಂದರ್ಭ ಕೂಡ ಶಿನವಗೌಡ ನಾಯಕರು ಇಂತಹ ಕಾರ್ಯಕ್ರಮ ಹಮ್ಮಿಕೊಂಡು ಬಡ ಜನರಿಗೆ ಸಹಾಯ ಮಾಡಿದ್ದು, ಈ ಬಾರಿಯೂ ಸಹಾಯಕ್ಕೆ ಮುಂದಾಗಿದ್ದು, ಇದರಿಂದ ಪ್ರಸ್ತುತ ಸರ್ಕಾರಕ್ಕೆ ಉತ್ತಮ ಹೆಸರು ಬರುತ್ತದೆ ಎಂದರು.
ಚೀಕಲಪರ್ವಿ ಅನ್ನದಾನಿ ದೇವರು, ಕಲ್ಲೂರು ಶಂಭುಲಿಂಗಯ್ಯ ಸ್ವಾಮೀಜಿ, ಮಹಾಂತಲಿಂಗ ಸ್ವಾಮೀಜಿ ಕರೇಗುಡ್ಡ, ನವಲಕಲ್ ಅಭಿನವ ಸೋಮನಾಥ ಶಿವಾಚಾರ್ಯ, ಫಾದರ್ ಜ್ಞಾನಪ್ರಕಾಶಂ, ಫಾದರ್ ಸುಂದರರಾಜ್, ಸೈಯದ್ ಮುಫ್ತಿ ಜಿಶಾನ್ ಹಸನ್‌ಖಾದ್ರಿ, ಮಾಜಿ ಶಾಸಕರಾದ ಗಂಗಾಧರ ನಾಯಕ, ಬಸನಗೌಡ ಬ್ಯಾಗವಾಟ ಮಾತನಾಡಿದರು.
ಮುಖಂಡರಾದ ತ್ರಿವಿಕ್ರಮ ಜೋಷಿ, ಜೆ.ಶರಣಪ್ಪಗೌಡ, ಎಂ.ಈರಣ್ಣ, ಕೆ.ಬಸವಂತಪ್ಪ, ಆರ್.ತಿಮ್ಮಯ್ಯಶೆಟ್ಟಿ, ರಮಾನಂದ ಯಾದವ್, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಎಸ್.ತಿಮ್ಮಾರೆಡ್ಡಿ ಭೋಗಾವತಿ, ಡಾ.ಶರಣಪ್ಪ ಬಲ್ಲಟಗಿ, ಶರಣಪ್ಪಗೌಡ ನಕ್ಕುಂದಿ, ವೀರೇಶ ನಾಯಕ ಬೆಟ್ಟದೂರು, ಶರಣುಗೌಡ ಲಕ್ಕಂದಿನ್ನಿ, ದೇವರಾಜ್ ನಾಯಕ, ಅಯ್ಯಪ್ಪ ನಾಯಕ ಮ್ಯಾಕಲ್ ಹಾಗೂ ವಿವಿಧ ಪಕ್ಷದ ಮುಖಂಡರಿದ್ದರು.