ರಾಯಣ್ಣ ಪುತ್ಥಳಿ ಅಪಮಾನಿಸಿದವರ ಬಂಧಿಸಿ; ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಂಘರ್ಷ ಸಮಿತಿ ಒತ್ತಾಯ

24112020 Sirwar Rayanna Statu, Insult
Published on

ಮಾನ್ವಿ: ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಲು ಒತ್ತಾಯಿಸಿ ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಂಘರ್ಷ ಸಮಿತಿ, ಮಂಗಳವಾರ ತಹಸಿಲ್ ಕಚೇರಿಯ ಕಂದಾಯ ಅಧಿಕಾರಿ ಮಹೇಶಗೆ ಮನವಿ ಸಲ್ಲಿಸಿತು.

ರಾಯಣ್ಣ ಪುತ್ಥಳಿಗೆ ಅವಮಾನಿಸಿದ ದುಷ್ಕರ್ಮಿಗಳ ಬಂಧನ ಆಗದಿರುವುದು ಖಂಡನೀಯ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.


ಸಮಿತಿ ಸದಸ್ಯರಾದ ಕರಿಯಪ್ಪ ನೀರಮಾನ್ವಿ, ನಾಗಪ್ಪ, ಅಮರೇಶ, ರಮೇಶ ಜಗ್ಲಿ, ಖಾಸಿಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net