ಓದುವ ಹವ್ಯಾಸ ಹೆಚ್ಚಿಸಿಕೊಳ್ಳಿ

04102020 Manvi Book Release
Published on

ಮಾನ್ವಿ: ಇಂದಿನ ದಿನಮಾನಗಳಲ್ಲಿ ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಕುಸಿಯುತ್ತಿದೆ. ಹೆಚ್ಚು ಪುಸ್ತಗಳನ್ನು ಓದಿದಷ್ಟು ಜ್ಞಾನ ಹೆಚ್ಚುತ್ತದೆ ಎಂದು ಕಸಪಾ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಹೇಳಿದರು.

ಪಟ್ಟಣದ ಕಲ್ಮಠ ಗುರುಭವನದಲ್ಲಿ ಸಾಹಿತಿ ರಮೇಶಬಾಬು ಯಾಳಗಿ ರಚಿಸಿದ ‘ಬದುಕೊಂದು ಭಾವಗೀತೆ’ ಕೃತಿಯನ್ನು ಭಾನುವಾರ ಬಿಡುಗಡೆ ಮಾಡಿ ಮಾತನಾಡಿದರು. ಸಾಹಿತಿ ರಮೇಶಬಾಬು ಯಾಳಗಿಯವರ ಕೃತಿಯಲ್ಲಿ ದ್ವಿಪದಿಗಳನ್ನು ರಚಿಸಿದ್ದಾರೆ. ಸಾಹಿತ್ಯ ಉತ್ತಮವಾಗಿ ಮೂಡಿಬಂದಿದೆ ಎಂದರು.

ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶ್ರೀಗಳು, ಕಸಾಪ ತಾಲೂಕು ಅಧ್ಯಕ್ಷ ಮಹ್ಮದ್ ಮುಜೀಬ್, ಕೃತಿಕಾರ ರಮೇಶಬಾಬು ಯಾಳಗಿ, ಕಲ್ಮಠ ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ಪಾಟೀಲ್ ಮಾತನಾಡಿದರು. ಡಾ.ಚಂದ್ರಶೇಖರಯ್ಯ ಸ್ವಾಮಿ ಕೃತಿಯ ಪರಿಚಯ ಮಾಡಿಕೊಟ್ಟರು. ಪ್ರಮುಖರಾದ ಸೈಯ್ಯದ್ ಅಕ್ಬರ್‌ಪಾಷ, ಸಂಗಯ್ಯಸ್ವಾಮಿ, ನಾಗಭೂಷಣಸ್ವಾಮಿ, ಪ್ರಭಯ್ಯಸ್ವಾಮಿ, ಮಂಜುನಾಥ ಕಮತರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net