

ಮಾನ್ವಿ: ಕಾರ್ತಿಕ ಮಾಸದಲ್ಲಿ ದೀಪಗಳನ್ನು ಹಚ್ಚುವುದರಿಂದ ನಮ್ಮಲ್ಲಿನ ಅಂಧಕಾರ ಕಳೆದು ಜ್ಞಾನ ಹೆಚ್ಚುತ್ತದೆ ಎಂದು ಕಲ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಈಶ್ವರ ದೇವಸ್ಥಾನದ 20ನೇ ವಾರ್ಷಿಕೋತ್ಸವ ಮತ್ತು ಕಾರ್ತಿಕ ಮಾಸದ ಸಹಸ್ರ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ಭಕ್ತರಿಂದ ದಾನವಾಗಿ ಪಡೆದ ಈ ಸ್ಥಳ, ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಿದೆ ಎಂದರು.
ಕಳೆದ 20 ವರ್ಷಗಳಿಂದ ಪಟ್ಟಣದ ಸರ್ವ ಸಮುದಾಯಗಳು ಜಾತಿ, ಮತ, ಧರ್ಮ ಬೇಧವಿಲ್ಲದೆ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿವೆ. ವೀರಶೈವ ಲಿಂಗಾಯತ ಸಮುದಾಯದವರು ಹಾಗೂ ಅನೇಕ ದಾನಿಗಳು ದೇವಸ್ಥಾನ ಆವರಣದಲ್ಲಿ ಭವ್ಯವಾದ ಸಮುದಾಯ ಭವನ, ನೆರಳಿಗಾಗಿ ಛಾವಣಿ ವ್ಯವಸ್ಥೆ ಮಾಡಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸಿರುವುದು ಶ್ಲಾಘನಾರ್ಹ ಎಂದರು.
ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ವೀರಪ್ಪಗೌಡ ಚೀಕಲಪರ್ವಿ, ಶಂಕರಯ್ಯಸ್ವಾಮಿ ಸುವರ್ಣಗಿರಿ ಮಠ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜಪ್ಪ ಚಿಮ್ಮಲಪೂರ, ಕಾರ್ಯದರ್ಶಿ ಶ್ರೀಧರಸ್ವಾಮಿ, ವೀರನಗೌಡ, ಶೇಖರಪ್ಪ ವಕೀಲರು, ಬಸವನಗೌಡ, ರಾಮನಗೌಡ, ಹರಿಹರಪಾಟೀಲ್, ಖಲೀಲ್ ಕುರೇಶಿ, ಬಸವರಾಜಪ್ಪ, ಮೆಹಬೂಬ್, ಪಂಪಾಪತಿ, ಶಿವಲಿಂಗಯ್ಯ, ನಜೀರ್ ಗುರು ಇತರರಿದ್ದರು.