

ಮಾನ್ವಿ: ಕರವೇ ಅಧ್ಯಕ್ಷ ಹಾಗೂ ಕಾರ್ಯಕರ್ತರನ್ನು ಬಿಡುಗೊಡೆಗೊಳಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಕಾರ್ಯಕರ್ತರು ಪಟ್ಟಣದ ತಹಸಿಲ್ ಕಚೇರಿಯ ಗ್ರೇಡ್-2 ತಹಸೀಲ್ದಾರ್ ಅಬ್ದುಲ್‌ವಾಹಿದ್‌ಗೆ ಮನವಿ ಸಲ್ಲಿಸಿದರು.
ಕನ್ನಡ ನಾಮಫಲಕ ಅಳವಡಿಸಲು ಆಗ್ರಹಿಸಿ ಹೋರಾಟ ನಿರತ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿ ಕಾರ್ಯಕರ್ತರನ್ನು ಬಂಧನ ಮಾಡಲಾಗಿದೆ. ಪೊಲೀಸರು ದೌರ್ಜನ್ಯ, ಹಲ್ಲೆ ಎಸಗಿ ವಶಕ್ಕೆ ಪಡೆದುಕೊಂಡಿದ್ದಾರೆ. ನಾಡು, ನುಡಿಗಾಗಿ ವೇದಿಕೆಯಿಂದ ಹೋರಾಟ ಮಾಡಲಾಗುತ್ತಿದೆ. ಕೂಡಲೇ ಸರ್ಕಾರ ಹೋರಾಟಗಾರರನ್ನು ಬಿಡುಗಡೆಗೊಳಿಸಲಿ ಎಂದು ಒತ್ತಾಯಿಸಿದರು.
ಕರವೇ ತಾಲೂಕು ಅಧ್ಯಕ್ಷ ಡಿ.ಬಸನಗೌಡ, ನಗರ ಘಟಕದ ಅಧ್ಯಕ್ಷ ರಹಿಮತ್ ಅಲಿ, ಕಾರ್ಯದರ್ಶಿ ರಾಜೇಶ, ಪದಾಧಿಕಾರಿಗಳ ವಸಂತಗೌಡ ಬ್ಯಾಗವಟ, ಮುಜ್ಜ ಪಾಟೀಲ್, ಕೆ.ಎಂ. ಬಾಷಾ, ನಾಗಪ್ಪ, ಹುಸೇನ್‌ಬಾಷಾ, ಮುದುಕಪ್ಪನಾಯಕ, ಲಕ್ಷ್ಮಣ, ವಿರುಪಾಕ್ಷಿ, ರಾಘವೇಂದ್ರ, ಬಸವರಾಜ್, ಬಸವ, ಅಂಜನಪ್ಪ ಇನ್ನಿತರರಿದ್ದರು.