ಅಭಿಮಾನ ಸೀಮಿತವಾಗದಿರಲಿ ಎಂದ ಶಾಸಕ ರಾಜಾ ವೆಂಕಟಪ್ಪ ನಾಯಕ

01112020 Manvi Kannada Rajyostav
Published on

ಮಾನ್ವಿ: ಕನ್ನಡ ನಾಡು-ನುಡಿ, ನೆಲ-ಜಲ ಅಭಿಮಾನ ಕನ್ನಡ ರಾಜ್ಯೋತ್ಸವ ದಿನಕ್ಕೆ ಸಿಮೀತವಾಗವಾರದು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು. ತಹಸೀಲ್ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿದೇವಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಕರೋನಾದಿಂದಾಗಿ ಸರಳ ರೀತಿ ಆಚರಣೆಯಾಗುತ್ತಿದೆ ಎಂದರು.

ತಹಸೀಲ್ದಾರ್ ಶಂಶಾಲಂ ಧ್ವಜಾರೋಹಣ ನೇರವೇರಿಸಿದರು. ಮುಖಂಡರಾದ ರಾಜಾ ರಾಮಚಂದ್ರ ನಾಯಕ, ಶರಣಪ್ಪ ಮೇದಾ, ಭಾಷಾಸಾಬ್, ಖಲೀಲ್ ಖುರೇಶಿ, ಕಜಾಪ ಅಧ್ಯಕ್ಷ ತಾಯಪ್ಪ ಹೊಸೂರು, ಬಾಲಾಜಿಸಿಂಗ್ ಇತರರು ಇದ್ದರು.

ಕಸಾಪ: ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಮಹ್ಮದ್ ಮುಜೀಬ್ ಧ್ವಜಾರೋಹಣ ನೆರವೇರಿಸಿದರು. ಶರಣೇಗೌಡ ಯರದೊಡ್ಡಿ, ಮಹ್ಮದ್ ಇಸ್ಮಾಯಿಲ್, ಶ್ರೀಧರಸ್ವಾಮಿ, ವಿರೇಶ ಉಪ್ಪಾರ್, ದೊಡ್ಡಣ್ಣ ಹೂಗಾರ, ಹುಸೇನಪ್ಪ, ಮನೋಹರ ವಿಶ್ವಕರ್ಮ, ಸಂತೋಷ ಹೂಗಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net