ಕನಕದಾಸರು ಮತ್ತು ವೀರವನಿತೆ ಒನಕೆ ಓಬವ್ವರ ಸಾಹಸಗಾಥೆ ಅಜರಾಮರ

111122 Manvi Kanakadasa, Obavva Jayanti
ಮಾನ್ವಿ ತಹಸಿಲ್ ಕಚೇರಿಯಲ್ಲಿ ಕನಕದಾಸರು ಮತ್ತು ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಶುಕ್ರವಾರ ಉದ್ಘಾಟಿಸಿದರು.
Published on

ಮಾನ್ವಿ: ಕನಕದಾಸರು ಮತ್ತು ವೀರವನಿತೆ ಒನಕೆ ಓಬವ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ಕನಕದಾಸರಯ ಹಾಗೂ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಲೋಕಕ್ಕೆ ಅನೇಕ ಕೀರ್ತನೆಗಳು, ಸುಳಾದಿಗಳು ಮತ್ತು ಊಗಾಭೋಗಾಗಳನ್ನು ಕೂಡುಗೆಯಾಗಿ ನೀಡಿರುವ ಕನಕದಾಸರು ದಾಸ ಸಾಹಿತ್ಯದ ಮೂಲಕ ಜೀವನ ಪಾಠ ಸಾರಿದರು, ಹಾಲುಮತ ಸಮುದಾಯದವರು ಶಿಕ್ಷಣ ಪಡೆದು ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಬೆಳೆಯಬೇಕು. ಒನಕೆ ಓಬವ್ವ ಹೈದರಾಲಿ ಸೈನ್ಯದ ವಿರುದ್ಧ ಏಕಾಂಗಿಯಾಗಿ ಹೋರಾಡಿದ ಸಾಹಸಗಾಥೆ ಅಜರಾಮರ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net