ಮಾನ್ವಿ ಕಲ್ಮಠದಲ್ಲಿ 26ರಿಂದ ದಸರಾ ಮಹೋತ್ಸವ

Virupakshaya Panditaradhya Swamji, Manvi Kalmatha
ಕಲ್ಮಠ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ, ಮಾನ್ವಿ.
Published on

ಮಾನ್ವಿ: ಪಟ್ಟಣದ ಮುಕ್ತಗುಚ್ಚ ಬೃಹನ್ಮಠ ಕಲ್ಮಠದಲ್ಲಿ ಸೆ.26 ರಿಂದ ಅ.7 ವರಗೆ 47 ನೇ ದಸರಾ ಮಹೋತ್ಸವ ಅಂಗವಾಗಿ ಶ್ರೀದೇವಿ ಪುರಾಣ ಮತ್ತು ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮಗಳನ್ನು ಕಲ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ ತಿಳಿಸಿದ್ದಾರೆ.

ಸೆ.26 ರಿಂದ ಅ.7 ವರಗೆ ಪ್ರತಿ ದಿನ ಬೆಳಗ್ಗೆ 11ಕ್ಕೆ ಶ್ರೀದೇವಿ ರಜತ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗುವುದು. ಮಧ್ಯಾಹ್ನ 12ಕ್ಕೆ 108 ಬಾಲ ಮುತ್ತೈದೆಯರ ಪಾದಪೂಜೆ, ಪ್ರಸಾದ, ಸಂಜೆ 6.30 ರಿಂದ 8.30 ರವರೆಗೆ ಪುರಾಣ-ಪ್ರವಚನ ನಡೆಯಲಿದೆ. ಪ್ರವಚನಕಾರ ಸಂಗಯ್ಯಶಾಸ್ತ್ರಿ ಅಲೂರು, ಗವಾಯಿ ವಿರೂಪಾಕ್ಷಯ್ಯಸ್ವಾಮಿ ವಂದಲಿ ಪ್ರವಚನ ನಡೆಸಲಿದ್ದು, ಸಿದ್ದಯ್ಯಸ್ವಾಮಿ ಮದ್ಲಾಪುರ ತಬಲ ನುಡಿಸಲಿದ್ದಾರೆ.

ಅ.6 ರಂದು ಪುರಾಣ ಮಂಗಲೋತ್ಸವ, ಅ.7 ರಂದು ಬೆಳಗ್ಗೆ 8ಕ್ಕೆ ಕಲ್ಮಠದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಜತಮೂರ್ತಿ ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಮುತ್ತೈದೆಯರಿಂದ ಕುಂಬ, ಕಳಸ, ವಿವಿಧ ಧರ್ಮ ಗುರುಗಳ ಭಾವಚಿತ್ರ, ಬಿಚ್ಚಾಲಿ ಶ್ರೀಮಠದ ಗಜಲಕ್ಷ್ಮೀ ಆನೆ ಮೇಲೆ ಬಾಲದೇವಿಯ ಮೆರವಣಿಗೆ ನಡೆಯಲಿದೆ ಎಂದು ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net