ಸ್ವಚ್ಛವಾಗಿ ಕೈತೊಳೆಯುವಂತೆ ಸಲಹೆ

14092021 Manvi students covid vacine
Published on

ಮಾನ್ವಿ: ಪಟ್ಟಣದ ಕಳಿಂಗ ಪಿಯು ಮತ್ತು ಮಹಿಳಾ ಪದವಿ ಕಾಲೇಜ್‌ನಲ್ಲಿ ಮಂಗಳವಾರ ಆರೋಗ್ಯ ನಂದನ ಕಾರ್ಯಕ್ರಮದಡಿಯಲ್ಲಿ ಕಾಲೇಜ್ ವಿದ್ಯಾರ್ಥಿಗಳಿಗೆ ಡಾ. ಶ್ರೀಧರಸಾಯಿ ಆರೋಗ್ಯ ತಪಾಸಣೆ ನಡೆಸಿದರು.

ವಿದ್ಯಾರ್ಥಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಿಟಮಿನ್ಸ್ ಮತ್ತು ಐರನ್ ಔಷಧಗಳನ್ನು ನೀಡಲಾಗುತ್ತಿದೆ. ಕರೊನಾ ತಡೆಗಟ್ಟಲು ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಊಟ ಮಾಡುವಾಗ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು ಎಂದು ಸಲಹೆ ನೀಡಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಆಂಜನೇಯ್ಯ, ಆರ್ಶದ್, ಪ್ರಮೊದ್, ಕಳಿಂಗ ಕಾಲೇಜ್‌ನ ಕಾರ್ಯದರ್ಶಿ ಡಾ. ರಾಜಶೇಖರ, ಪ್ರಾಚಾರ್ಯ ಅಮರೇಶ, ಉಪನ್ಯಾಸಕರಾದ ಲಾವಣ್ಯ, ವಿದ್ಯಾಭಾರತಿ ಇದ್ದರು.

ಸರ್ಕಾರದ ಆದೇಶದಂತೆ ಆರು ತಿಂಗಳಿಂದ 18 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇದಕ್ಕಾಗಿ 15 ತಂಡ ರಚಿಸಲಾಗಿದೆ. ಪ್ರತಿ ಶಾಲಾ-ಕಾಲೇಜ್‌ಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡಲಾಗುತ್ತದೆ.| ಡಾ.ಚಂದ್ರಶೇಖರಯ್ಯಸ್ವಾಮಿ, ತಾಲೂಕು ವೈದ್ಯಾಧಿಕಾರಿ, ಮಾನ್ವಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net