ಬೆಳೆಸಾಲ ಸಂಪೂರ್ಣ ಮನ್ನಾ ಮಾಡಲಿ

Manvi JDS protest
ಮಾನ್ವಿಯ ಬಸವ ವೃತ್ತದಲ್ಲಿ ಜೆಡಿಎಸ್ ಮಾನ್ವಿ ಮತ್ತು ಸಿರವಾರ ಘಟಕದಿಂದ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ, ಜೆಡಿಎಸ್ ತಾಲೂಕು ಅಧ್ಯಕ್ಷ ಈರಣ್ಣ ಮರ್ಲಟ್ಟಿ ಪೋತ್ನಾಳ, ಸಿರವಾರ ತಾಲೂಕು ಅಧ್ಯಕ್ಷ ಟಿ.ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ಪುರಸಭೆ ಸದಸ್ಯ ರಾಜಾ ಮಹೇಂದ್ರ ನಾಯಕ, ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ನಗರ ಘಟಕದ ಅಧ್ಯಕ್ಷ ಎಚ್.ಮೌನೇಶಗೌಡ ಇತರರಿದ್ದರು.
Published on

ಮಾನ್ವಿ: ಅತಿವೃಷ್ಟಿಯಿಂದ ಬೆಳೆಹಾನಿಗೀಡಾದ ರೈತರಿಗೆ ಸೂಕ್ತ ಪರಿಹಾರ ವಿತರಿಸಬೇಕೆಂದು ಆಗ್ರಹಿಸಿ ಪಟ್ಟಣದ ಬಸವ ವೃತ್ತದಲ್ಲಿ ಜೆಡಿಎಸ್ ಮಾನ್ವಿ ಮತ್ತು ಸಿರವಾರ ಘಟಕದಿಂದ ಗುರುವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.

ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಮಾನ್ವಿ ಮತ್ತು ಸಿರವಾರ ತಾಲೂಕುಗಳಲ್ಲಿ ಹತ್ತಿ 25,477 ಹೆಕ್ಟೇರ್, ಜೋಳ 22,863 ಹೆಕ್ಟೇರ್ ಮತ್ತು ತೊಗರಿ 725 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ. ತಾಲೂಕಿನ ಶಾಸಕರು, ಸಚಿವರು ಹಾಗೂ ಅಧಿಕಾರಿಗಳು ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬೆಳೆ ಹಾನಿ ಸಮೀಕ್ಷೆ ನಡೆಸಿ ರೈತರಿಗೆ ಪ್ರತಿ ಎಕರೆ ಹತ್ತಿಗೆ 30 ಸಾವಿರ ರೂ. ಹಾಗೂ ಜೋಳಕ್ಕೆ 35 ಸಾವಿರ ರೂ., ತೊಗರಿಗೆ 30 ಸಾವಿರ ರೂ. ಪರಿಹಾರ ನೀಡಬೇಕು. ರೈತರು ಸಹಕಾರಿಗಳಲ್ಲಿ ಪಡೆದ ಬೆಳೆಸಾಲ ಸಂಪೂರ್ಣ ಮನ್ನಾಮಾಡಬೇಕು ಎಂದು ಒತ್ತಾಯಿಸಿದರು.

ಬಸವ ವೃತ್ತದಿಂದ ತಹಸಿಲ್ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ ಗ್ರೇಟ್-2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಶರಣಪ್ಪಗೌಡ ಮದ್ಲಾಪುರ, ನಾಗರಾಜ ಭೋಗಾವತಿ, ಶಶಿಧರ್‌ಗೌಡ ನೀರಮಾನ್ವಿ, ಶಂಕರಗೌಡ ಸಂಗಾಪುರ, ಬಾಷಾಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net