ಜಾನೇಕಲ್ ಗ್ರಾಪಂ ಅಧ್ಯಕ್ಷೆ ರಾಜೀನಾಮೆ

110422 Janekal GP President Resign
ರಾಯಚೂರಿನಲ್ಲಿ ಸಹಾಯಕ ಆಯುಕ್ತ ರಾಜೇಂದ್ರ ಚವ್ಹಾಣ್‌ಗೆ ಜಾನೇಕಲ್ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಅಮರೇಶ ನಾಯಕ ಸೋಮವಾರ ರಾಜೀನಾಮೆ ಪತ್ರ ಸಲ್ಲಿಸಿದರು.
Published on

ಮಾನ್ವಿ: ತಾಲೂಕಿನ ಜಾನೇಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಅಮರೇಶ ನಾಯಕ ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಸಹಾಯಕ ಆಯುಕ್ತ ರಾಜೇಂದ್ರ ಚವ್ಹಾಣ್‌ಗೆ ರಾಜೀನಾಮೆ ನೀಡಿದರು.

ಇದುವರೆಗೆ ಗ್ರಾಪಂ ಅಧ್ಯಕ್ಷ ಸ್ಥಾನ ನಿರ್ವಹಿಸಿದ್ದು ಕೆಲ ಕೌಟುಂಬಿಕ ಸಮಸ್ಯೆ, ಕೆಲಸಗಳ ಒತ್ತಡದಿಂದ ಅಧ್ಯಕ್ಷೆ ಸ್ಥಾನದ ಕೆಲಸ ನಿರ್ವಹಿಸಲಾಗದೆ ರಾಜೀನಾಮೆ ನೀಡಿದ್ದು ಇದನ್ನು ಅಂಗೀಕರಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಮುಖಂಡ ರಾಜಾ ವಸಂತನಾಯಕ, ಮುಖಂಡರಾದ ಅಮರೇಶ ನಾಯಕ, ನಾಗರಾಜ ಸಾಹುಕಾರ, ರೇವಣಸಿದ್ದಯ್ಯಸ್ವಾಮಿ, ವೆಂಕೋಬ ನಾಯಕ, ಚನ್ನಪ್ಪ, ಪೀರ್‌ಭಾಷಾ, ಪಿಡಿಒ ಮಲ್ಲೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net