ಜಗನ್ನಾಥದಾಸರ ಮಹಾರಥೋತ್ಸವ

06092022 Manavi Jaganath dasara aaradhane
Published on

ಮಾನ್ವಿ: ಪಟ್ಟಣದ ನಂಜನಗೂಡು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಜಗನ್ನಾಥದಾಸರ ಸನ್ನಿಧಾನದಲ್ಲಿ ಸೋಮವಾರ ಉತ್ತರಾಧನೆ ಅಂಗವಾಗಿ ಮಹಾರಥೋತ್ಸವ ಜರುಗಿತು. ಜಗನ್ನಾಥದಾಸರ ಸ್ತಂಭ ಕಂಬಕ್ಕೆ ಬೆಳಗ್ಗೆ ಫಲ ಪಂಚಾಮೃತ ಅಭಿಷೇಕ ಹಾಗೂ ವಿವಿಧ ಹೂಗಳಿಂದ ವಿಶೇಷವಾದ ಅಲಂಕಾರ ಮಾಡಲಾಯಿತು. ಸ್ವಸ್ತಿವಾಚನ ಹರಿಕಾಥಮೃತಸಾರ ವಾಚನ, ವಿದ್ವಾಂಸರಿಂದ ಪ್ರವಚನ ಹಾಗೂ ಕಲಾವಿದರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net