ಸುರಕ್ಷತಾ ನಿಯಮ ಪಾಲನೆ ಕಡ್ಡಾಯ

mnv-1
ಮಾನ್ವಿಯಲ್ಲಿ ಸುರಕ್ಷತಾ ನಿಯಮ ಉಲ್ಲಂಘಿಸಿದ ಡಾಬಾವನ್ನು ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ನೇತೃತ್ವದಲ್ಲಿ ಸೀಜ್ ಮಾಡಲಾಯಿತು. ಆಹಾರ ಸುರಾಕ್ಷತಾಧಿಕಾರಿ ಶರಣಬಸಪ್ಪ ಹೊಸಮನಿ ಇತರರಿದ್ದರು.
Published on

ಮಾನ್ವಿ: ಡಾಬಾ ಮತ್ತು ಹೋಟೆಲ್‌ಗಳಲ್ಲಿ ಅಡುಗೆ ತಯಾರಿಸುವವರು ಅಗತ್ಯ ಸುರಕ್ಷತಾ ವಸ್ತ್ರಗಳನ್ನು ಧರಿಸಬೇಕು. ಗ್ರಾಹಕರ ಆರೋಗ್ಯಕ್ಕೆ ಹೆಚ್ಚು ಅದ್ಯತೆ ನೀಡಬೇಕು ಎಂದು ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಅವರು ಮಾಲೀಕರಿಗೆ ತಿಳಿಸಿದರು.

ಪಟ್ಟಣದ ವಿವಿಧ ಹೋಟೆಲ್ ಹಾಗೂ ಡಾಬಾಗಳಿಗೆ ಆಹಾರ ಸುರಕ್ಷತಾಧಿಕಾರಿಗಳ ಜತೆಗೆ ಗುರುವಾರ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿದರು.

ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಸಿ ಗ್ರಾಹಕರಿಗೆ ಶುಚಿ ಮತ್ತು ರುಚಿ ಆಹಾರವನ್ನು ಪೂರೈಕೆ ಮಾಡಬೇಕು. ಅಡುಗೆ ಮನೆಯಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಡಾಬಾ ಮಾಲೀಕರಿಗೆ ಸೂಚಿಸಿದರು.

ಆಹಾರ ಸುರಕ್ಷತಾಧಿಕಾರಿ ಬನದೇಶ್ವರ ಮಾತನಾಡಿ, ಡಾಬಾ ಮಾಲೀಕರು ಕಡ್ಡಾಯವಾಗಿ ಆಹಾರ ಸುರಕ್ಷತಾ ಪರವಾನಗಿ ಪತ್ರ ಪಡೆಯಬೇಕು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ನಾಲ್ಕು ತಿಂಗಳಿಂದ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದವರ ಮಾಲೀಕತ್ವದ ಡಾನ್ ಡಾಬಾ ಮತ್ತು ಭಾರತ ಡಾಬಾಗಳಿಗೆ ಬೀಗ ಜಡಿಯಲಾಯಿತು. ಆಹಾರ ಸುರಕ್ಷತಾಧಿಕಾರಿ ಶರಣಬಸಪ್ಪ ಹೊಸಮನಿ, ಅಹಾರ ನಿರೀಕ್ಷಕರಾದ ಮಹೇಶಕುಮಾರ, ದೇವರಾಜ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net