ಮಾನ್ವಿಯಲ್ಲಿ ಸಂಭ್ರಮದ ಹೋಳಿ

190322 Manvi Holi Celebration
ಮಾನ್ವಿಯಲ್ಲಿ ಹೋಳಿ ಹಬ್ಬದ ನಿಮಿತ್ತ ಬಣ್ಣದ ಗಡಿಗೆ ಒಡೆಯಲು ಪ್ರಯತ್ನಿಸುತ್ತಿರುವ ಯುವಕರು.
Published on

ಮಾನ್ವಿ: ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಶನಿವಾರ ವಿಎಚ್‌ಪಿ ಮತ್ತು ಬಜರಂಗದಳದಿಂದ ಬಣ್ಣದ ಗಡಿಗೆ ಒಡೆದು ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದ ಹೋಳಿ ಆಚರಿಸಲಾಯಿತು.

ಕಲ್ಮಠದ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿ, ಎರಡು ವರ್ಷಗಳಿಂದ ಕರೊನಾದಿಂದಾಗಿ ಹೋಳಿ ಹಬ್ಬ ಆಚರಿಸಲಾಗಿರಲಿಲ್ಲ. ಈ ಬಾರಿ ಜನರು ಒಂದಡೆ ಸೇರಿ ಬಣ್ಣದ ಗಡಿಗೆ ಒಡೆದು ಪರಸ್ಪರ ಬಣ್ಣ ಹಚ್ಚಿಕೊಳ್ಳುವ ಸಂಭ್ರಮ ಒದಗಿಬಂದಿದೆ. ಓಕುಳಿ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕೆಂದರು.

ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಜೆಡಿಎಸ್ ರಾಜ್ಯ ಯುವ ಘಟಕ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿ ಭೋಗಾವತಿ, ನಯೋಪ್ರಾ ಅಧ್ಯಕ್ಷ ಶರಣಪ್ಪಗೌಡ ನಕ್ಕುಂದಿ, ಪಿಐ ಮಹಾದೇವಪ್ಪ ಪಂಚಮುಖಿ, ಮುಖಂಡರಾದ ಶಂಕ್ರಯ್ಯಸ್ವಾಮಿ ಸುವರ್ಣಗಿರಿಮಠ, ಜಿ.ನಾಗರಾಜ, ಶ್ರೀಕಾಂತ ಪಾಟೀಲ್ ಗೂಳಿ, ಶಿವರಾಜ ಜಾನೇಕಲ್, ಪುರಸಭೆ ಸದಸ್ಯ ಶರಣಪ್ಪ ಮೇದಾ, ಸೂಗಪ್ಪಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net