ರಸ್ತೆಗಳ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಅನುದಾನ

Manvi road development
ಮಾನ್ವಿ ಪಟ್ಟಣದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾನುವಾರ 9 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಕಾಮಗಾರಿಗೆ ಸಚಿವ ಎನ್.ಎಸ್.ಬೋಸರಾಜು, ಶಾಸಕ ಹಂಪಯ್ಯ ನಾಯಕ ಚಾಲನೆ ನೀಡಿದರು. ಪ್ರಮುಖರಾದ ಶರಣಯ್ಯ ನಾಯಕ ಗುಡದಿನ್ನಿ ಇತರರಿದ್ದರು.
Published on

ಮಾನ್ವಿ: ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ಪಟ್ಟಣದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣದ ಕಾಮಗಾರಿ ಹಾಗೂ 6.30 ಕೋಟಿ ರೂ. ವೆಚ್ಚದಲ್ಲಿ ಬಾಷುಮಿಯಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಭಾಂಗಣ ಮತ್ತು ಗ್ರಂಥಾಲಯ, ಲ್ಯಾಬ್ ನಿರ್ಮಾಣದ ಕಾಮಗಾರಿ ಹಾಗೂ ಉದ್ಬಾಳದಿಂದ ತಡಕಲ್‌ವರೆಗೆ 4 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಾನ್ವಿ ವಿಧಾನಸಭೆ ಕ್ಷೇತ್ರದ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಕೆಕೆಆರ್‌ಡಿಬಿಯಡಿ ಹೆಚ್ಚುವರಿ 40 ಕೋಟಿ ರೂ. ಅನುದಾನ ತರಲಾಗುವುದು ಎಂದು ಮಾಹಿತಿ ನೀಡಿದ ಅವರು, ವಸತಿ ನಿಲಯದ ಕಟ್ಟಡ ಕಾಮಗಾರಿ ಗುಣಮಟ್ಟದೊಂದಿಗೆ ಮಾಡಬೇಕು ಎಂದು ಅಧಿಕಾರಿಗಳು, ಗುತ್ತಿದಾರರಿಗೆ ಸಚಿವ ಬೋಸರಾಜು ಸೂಚಿಸಿದರು.

ಶಾಸಕ ಹಂಪಯ್ಯ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್‌ಸಾಬ್, ಮುಖಂಡರಾದ ಶರಣಪ್ಪ ನಾಯಕ ಗುಡದಿನ್ನಿ, ಕೆ.ಶಾಂತಪ್ಪ, ಅಮರೇಗೌಡ ಹಂಚಿನಾಳ, ಬಿ.ಕೆ.ಅಮರೇಶಪ್ಪ, ಶಿವರಾಜನಾಯಕ ಸಾಹುಕಾರ, ಸೈಯದ್ ಖಾಲಿದ್‌ಖಾದ್ರಿ ಗುರು, ಸಬ್ಜಲಿಸಾಬ್, ಡಿ.ರಾಮಕೃಷ್ಣ, ಜಯಪ್ರಕಾಶ, ಸಾಬೀರಪಾಷಾ, ರೌಡೂರು ಮಹಾಂತೇಶಸ್ವಾಮಿ, ಸತ್ತಾರ್ ಬಂಗ್ಲೆವಾಲೆ, ಸಿ.ಗುರುನಾಥ ನಾಯಕ, ಡಿ.ವೀರೇಶ, ರಾಜಾ ಸುಭಾಶ್ಚಂದ್ರ ನಾಯಕ, ಪ್ರಾಚಾರ್ಯ ಜೆ.ಎಲ್.ಈರಣ್ಣ, ಗುತ್ತಿಗೆದಾರರಾದ ಸೂರ್ಯನಾರಾಯಣ, ರಾಮರಾಜು ಇತರರಿದ್ದರು.

ಚೀಕಲಪರ್ವಿ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಆಸಕ್ತಿ ವಹಿಸಿದೆ. ಈ ಬಗ್ಗೆ ಆಂಧ್ರ, ತೆಲಂಗಾಣ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪತ್ರ ವ್ಯವಹಾರ ನಡೆಸಿದ್ದಾರೆ. ಆದಷ್ಟು ಬೇಗ ಎರಡು ರಾಜ್ಯಗಳ ಸಿಎಂಗಳಿಂದ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ. | ಎನ್.ಎಸ್.ಬೋಸರಾಜು ಸಣ್ಣ ನೀರಾವರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net