ಬಿಸಿಲಿನ ತೀವ್ರತೆಗೆ ಬತ್ತಿದ ಪುರಾತನ ಹಾಲುಬಾವಿ

Untitled design (21)
ಮಾನ್ವಿಯ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರದ ಪುರಾತನ ಹಾಲುಬಾವಿ ಬತ್ತಿರುವುದು.
Published on

ಮಾನ್ವಿ: ಪಟ್ಟಣದ ಐತಿಹಾಸಿಕ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರದ ಪುರಾತನ ಹಾಲುಬಾವಿ ಬತ್ತಿ ಹೋಗಿದೆ. ಬಾವಿಯಲ್ಲಿ ವರ್ಷವೀಡಿ ನೀರು ಇರುತ್ತಿತ್ತು. ಆದರೆ ಈ ಬಾರಿಯ ಬೇಸಿಗೆ ಝಲಕ್ಕೆ ನೀರಿಲ್ಲದಂತಾಗಿದೆ. ಹಾಳುಬಾವಿಯ ನೀರನ್ನು ಕುಡಿಯಲು ಜನರು ಬಳಸುತ್ತಿದ್ದರು. ಈಗ ಕುಡಿಯಲು ನೀರಿಲ್ಲದಂತಾಗಿದೆ. ಬೆಟ್ಟದ ಮೇಲಿನ ಹಾಲುಬಾವಿಯ ನೀರು ಸಿಹಿಯಾಗಿರುವುದರಿಂದ ಪ್ರತಿನಿತ್ಯ ಮನೆಯಲ್ಲಿ ಅಡುಗೆ ಹಾಗೂ ಕುಡಿಯುವುದಕ್ಕೆ ಬಳಸಲಾಗುತ್ತಿತ್ತು. ಈಗ ಬತ್ತಿ ಹೋಗಿದ್ದು, ಸಂಕಷ್ಟ ಅನುಭವಿಸುವಂತಾಗಿದೆ ಎಂದು ಪಟ್ಟಣದ ನಿವಾಸಿ ಮರಿಸ್ವಾಮಿ ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net