‘ಗ್ಯಾರಂಟಿ’ ಭರವಸೆ ಈಡೇರಿಸಲು ಬದ್ಧ- ಮಾಜಿ ಶಾಸಕ ಹಂಪಯ್ಯ ನಾಯಕ ಹೇಳಿಕೆ

Manvi Congress Guarantee
ಮಾನ್ವಿಯಲ್ಲಿ ಮತದಾರರಿಗೆ ಮಾಜಿ ಶಾಸಕ ಹಂಪಯ್ಯ ನಾಯಕ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್‌ಗಳನ್ನು ಮಂಗಳವಾರ ನೀಡಿದರು.
Published on

ಮಾನ್ವಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಸಮಗ್ರ ಅಭಿವೃದ್ಧಿಯೊಂದಿಗೆ ಎಲ್ಲ ವರ್ಗದ ಜನರ ಅನುಕೂಲಕ್ಕಾಗಿ ಬಡವರಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು ಎಂದು ಮಾಜಿ ಶಾಸಕ ಹಂಪಯ್ಯ ನಾಯಕ ಹೇಳಿದರು.

ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಮತದಾರರಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳನ್ನು ನೀಡಿ ಮಂಗಳವಾರ ಮಾತನಾಡಿದರು. ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ., ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಹಾಗೂ 10 ಕೆಜಿ ಅಕ್ಕಿ ವಿತರಣೆ ಸೇರಿ ಇತರ ಯೋಜನೆಗಳನ್ನು ನೀಡಲು ಕಾಂಗ್ರೆಸ್ ಬದ್ಧವಾಗಿದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ರಾಜಾ ವಸಂತನಾಯಕ, ಪ್ರಮುಖರಾದ ಹನುಮೇಶ ಮದ್ಲಾಪುರು, ಚಂದ್ರಶೇಖರ ಕುರ್ಡಿ, ಸೈಯದ್ ನಜೀರುದ್ದೀನ್ ಖಾದ್ರಿ, ಸೈಯದ್ ಖಾಲಿದ್ ಖಾದ್ರಿ, ಅರುಣ್ ಚಂದಾ, ದೇವೇಂದ್ರಪ್ಪ ಬೊಮ್ಮನಾಳ, ಕೆ.ಶುಕಮುನಿ, ಹುಸೇನ್ ಬಾಷಾ, ಹುಸೇನ್ ಬೇಗ್, ಹೊನ್ನಪ್ಪ, ಚಾಂದ್ ಪಾಷ, ಇದಾಯತ್ ನಾಯ್ಕ, ರಸೂಲ್, ಶಂಕರ್ ಜಗ್ಲಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net