ಉತ್ತಮ ನಿರ್ವಹಣೆಯಿಂದ ಹೆಚ್ಚು ಇಳುವರಿ

Untitled design(3)
Published on

ಮಾನ್ವಿ : ಮುಂಗಾರಿನಲ್ಲಿ ತೊಗರಿಯನ್ನು ಹತ್ತಿಯೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಯಬಹುದಾಗಿದೆ ಎಂದು ಕುರ್ಡಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಾ.ಶಿವಶಂಕರ ಹೇಳಿದರು.

ತಾಲೂಕಿನ ಗೋರ್ಕಲ್ ಗ್ರಾಮದಲ್ಲಿ ಬುಧವಾರ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ರೈತರಿಗೆ ಬಿತ್ತನೆ ಬೀಜ ವಿತರಿಸಿ ಮಾತನಾಡಿದರು. ರೈತ ಸಂಪರ್ಕ ಕೇಂದ್ರದಿಂದ ಜಿಆರ್‌ಜಿ 811 ತಳಿಯ ತೊಗರಿ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗುತ್ತಿದೆ. ಈ ತಳಿಯು 180 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಸೂಕ್ತ ನಿರ್ವಹಣೆ ಮಾಡಿದರೆ ಎಕರೆಗೆ 8 ಕ್ವಿಂಟಾಲ್‌ವರೆಗೆ ತೊಗರಿ ಇಳುವರಿ ಪಡೆಯಬಹುದಾಗಿದೆ ಎಂದರು.

ರೈತರಿಗೆ ತೊಗರಿ ಬೆಳೆಯಲ್ಲಿ ಬಿತ್ತನೆ ಪೂರ್ವ ಕೈಗೊಳ್ಳಬೇಕಾದ ಬೀಜೋಪಚಾರ, ಕೀಟ ಮತ್ತು ರೋಗ ನಿರ್ವಹಣೆ ಹಾಗೂ ರಸಗೊಬ್ಬರ ಬಳಕೆ ಕುರಿತು ಮಾಹಿತಿ ನೀಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರಾದ ಜಂಬಣ್ಣ, ಆತ್ಮ ಯೋಜನೆಯ ತಾಂತ್ರಿಕ ಸಹಾಯಕ ವ್ಯವಸ್ಥಾಪಕ ಸೈಯ್ಯದ್ ಜಲಾಲ್, ಅನುವುಗಾರ ಲಕ್ಷ್ಮಣ, ರೈತರಾದ ಪಂಚಾಯ್ಯಸ್ವಾಮಿ ಹಿರೇಮಠ, ಪಂಪನಗೌಡ ಪೊಲೀಸ್ ಪಾಟೀಲ್, ಮೆಹಬೂಬ್ ಜೈನುದ್ದೀನ್, ಮಹಾಂತಪ್ಪಗೌಡ, ಗೂಳಪ್ಪ ವಾಲೇಕರ, ಹುಲಿಗೇಪ್ಪ, ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net