ಮಾನ್ವಿ: ಅಮೂಲ್ಯವಾದ ರಕ್ತವನ್ನು ಅವಶ್ಯಕತೆ ಇರುವವರ ಜೀವ ಉಳಿಸುವುದಕ್ಕಾಗಿ ದಾನ ಮಾಡುವ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕೆಂದು ಎಂದು ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ಸದಾಶಿವ ಶ್ರೀಗಳು ಹೇಳಿದರು.
ಪಟ್ಟಣದ ಕಳಿಂಗ ಪಿಯು ಕಾಲೇಜು ಆವರಣದಲ್ಲಿ ಗುರುವಾರ ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ವಿರೂಪಾಕ್ಷ ಮಹಾಸ್ವಾಮಿಗಳವರ 9ನೇ ವರ್ಷದ ಪುಣ್ಯಸ್ಮರಣೆಯ ರಕ್ತದಾನ ಶಿಬಿರ ಹಾಗೂ ಸಾರ್ಥಕ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ 6 ತಿಂಗಳಗೊಮ್ಮೆ ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ ಮತ್ತು ಹೃದಯಾಘಾತ ಸೇರಿದಂತೆ ಇನ್ನಿತರ ಕಾಯಿಲೆಗಳಿಂದ ದೂರವಿರಬಹುದು. ನಮ್ಮ ಜೀವನದಲ್ಲಿ ನಾವು ಮಾಡುವ ಕಾರ್ಯದಿಂದ ಇನ್ನೊಬ್ಬರಿಗೆ ಒಳಿತಾದಲ್ಲಿ ನಮ್ಮ ಕಾರ್ಯವು ಸಾರ್ಥಕವಾದಂತಾಗುತ್ತದೆ ಎನ್ನುವ ಭಾವ 12ನೇ ಶತಮಾನದಲ್ಲಿನ ಬಸವಾದಿ ಶರಣರಿಂದಲೇ ಪ್ರಾರಂಭವಾಗಿದೆ.
ವಿರೂಪಾಕ್ಷ ಮಹಾಸ್ವಾಮಿಗಳವರು ತಮ್ಮ ಜೀವನವನ್ನು ಭಕ್ತರ ಉದ್ಧಾರ ಮಾಡುವುದ್ದಾಕ್ಕಾಗಿ ಕಳೆದರು. ಶ್ರೀಮಠಕ್ಕೆ ಬಂದ ಭಕ್ತರಿಗೆ ಇಷ್ಟಾರ್ಥಗಳನ್ನು ನೆರವೇರುವಂತೆ ಆರ್ಶೀವದಿಸುವ ಮೂಲಕ ಭಕ್ತರನ್ನು ಹರಿಸಿದ್ದಾರೆ ಎಂದರು. ಮೈಸೂರಿನ ನಿರಂಜನ ಶ್ರೀಗಳು, ಬಳಗಾನೂರಿನ ಸಿದ್ದಬಸವ ಶ್ರೀಗಳು, ಮಾಜಿ ಶಾಸಕ ಗಂಗಾಧರ ನಾಯಕ, ಜಿಲ್ಲಾ ಅಯುಷ್ಯ ವೈದ್ಯಾಧಿಕಾರಿ ಡಾ.ಶಂಕರಗೌಡ ಪಾಟೀಲ್, ತಾಲೂಕು ವೈದ್ಯಾಧಿಕಾರಿ ಚಂದ್ರಶೇಖರಯ್ಯಸ್ವಾಮಿ, ಚೀಕಲಪರ್ವಿ ಅಯುಷ್ ವೈದ್ಯಾಲಯದ ಡಾ.ರಾಜೇಂದ್ರಕುಮಾರ, ರಿಮ್ಸ್ ರಕ್ತ ಭಂಡರಾದ ವೈದ್ಯರಾದ ಹೈಮದ್ ಹುಸೇನ್, ಕಳಿಂಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಬಲ್ಲಟ್ಟಗಿ, ನಿವೃತ್ತ ವೈದ್ಯಾಧಿಕಾರಿ ಡಾ.ಚಂದ್ರಶೇಖರಯ್ಯ ಸ್ವಾಮಿ ಸುವರ್ಣಗಿರಿ ಮಠ, ಮುಖಂಡರಾದ ದೊಡ್ಡಬಸ್ಸಪ್ಪಗೌಡ ಭೋಗಾವತಿ, ಅರುಣಚಂದ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಡಾ.ಚಂದ್ರಶೇಖರ ಸುವರ್ಣಗಿರಿಮಠ, ವೀರೇಶ ಎನ್.ಹೊಸೂರು, ಚಂದ್ರಮೌಳೇಶ್ವರ ಬೆಟ್ಟದೂರು, ಚಂದ್ರಪ್ಪಗೌಡ ಚೀಕಲಪರ್ವಿ, ಅರುಣ್ ಚಂದಾ, ಶ್ರೀಕಾಂತಪಾಟೀಲ್ ಗೂಳಿ, ಕಳಿಂಗ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಜಿ.ವಿ.ಎನ್.ರೆಡ್ಡಿ, ಶರಣಬಸವ ನೀರಮಾನ್ವಿ ಇನ್ನಿತರರು ಇದ್ದರು.