

ಕೊಕ್ಕರ್ಣೆ: ಡಾ.ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಕೋಟ, ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಮತ್ತು ಕೋಟತಟ್ಟು ಗ್ರಾಪಂ ವತಿಯಿಂದ ಕೊಡಮಾಡುವ ಡಾ.ಶಿವರಾಮ ಕಾರಂತ ಬಾಲಪುರಸ್ಕಾರ ಪ್ರಶಸ್ತಿಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗ ಕೊಕ್ಕರ್ಣೆ 5ನೇ ತರಗತಿ ವಿದ್ಯಾರ್ಥಿನಿ ಮಾನ್ವಿಗೆ ನೀಡಲಾಯಿತು. ಮಂದಾರ್ತಿ ಮೇಳದ ಪ್ರಧಾನ ಭಾಗವತ ಹಾಗೂ ಯಕ್ಷಗುರುಗಳಾದ ಮಹೇಶ್ ಮಂದಾರ್ತಿ ಮತ್ತು ಸುಲೇಖಾ ದಂಪತಿ ಪುತ್ರಿ.