ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ತಂಗಡಿಯ ಮಾನ್ವಿ ಎಸ್. ಪೂಜಾರಿ ದ್ವಿತೀಯ

9502b8ad-a3c0-4f9c-a083-c36b1182be15
Published on

ಮಂಗಳೂರು: ಬೆಂಗಳೂರಿನ ಶಿವಜ್ಯೋತಿ ಯೋಗ ಕೇಂದ್ರ, ಆದಿತ್ಯ ಸಾಯಿ ಯೋಗ ಸೆಂಟರ್‌ ಹಾಗೂ ಪಿ.ಎನ್.ಆರ್. ಯೋಗ ಕೇಂದ್ರ ಹೈದರಾಬಾದ್ ಸಹಯೋಗದಲ್ಲಿ ನಡೆದ ಡಾ.ರಾಜ್‌ಕುಮಾರ್ ಮೆಮೋರಿಯಲ್ 6ನೇ ವರ್ಷದ ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಚಾಂಪಿಯನ್‌ಶಿಪ್ -2022ನಲ್ಲಿ ಮಾನ್ವಿ ಎಸ್. ಪೂಜಾರಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ಮೂಲತಃ ಬೆಳ್ತಂಗಡಿ ತಾಲೂಕಿನ ಉಜಿರೆಯ ಅರಳಿ ನಿವಾಸಿಗಳಾದ ಶ್ರೀನಿವಾಸ್-ಭಾರತಿ ದಂಪತಿ ಪುತ್ರಿ ಮಾನ್ವಿ, ಮಂಗಳೂರಿನ ಕುಂಟಿಕಾನ ಸೇಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ 2ನೇ ತರಗತಿ ವಿದ್ಯಾರ್ಥಿನಿ.

6ನೇ ವಯಸ್ಸಿನಲ್ಲಿ ಯೋಗದಲ್ಲಿ ಆಸಕ್ತಿ ತೋರಿ ಒಂದು ವರ್ಷದಿಂದ ಆವಿಷ್ಕಾರ್ ಯೋಗ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದು, ಸುಮಾರು 75 ಆಸನಗಳನ್ನು ಅವುಗಳ ಹೆಸರಿನೊಂದಿಗೆ ಗುರುತಿಸಿಕೊಂಡು ಮಾಡುವ ಸಾಮರ್ಥ್ಯವನ್ನು ಮಾನ್ವಿ ಹೊಂದಿದ್ದಾಳೆ. ಯೋಗಾಸನ ಮಾತ್ರವಲ್ಲದೆ ಯಕ್ಷಗಾನದಲ್ಲೂ ಆಸಕ್ತಿ ಹೊಂದಿದ್ದು, ಮಾಲೆಮಾರ್‌ನ ಅಂಬುರುಹ ಯಕ್ಷ ಕಲಾ ಕೇಂದ್ರದಲ್ಲಿ ಪಟ್ಟುಗಳನ್ನು ಕಲಿಯುತ್ತಿದ್ದಾಳೆ. ಶಾಲಾ ಕಲಿಕೆಯಲ್ಲೂ ಮುಂದಿದ್ದು, ಆಟ, ನೃತ್ಯ, ಏಕಪಾತ್ರಾಭಿನಯಗಳನ್ನೂ ಬಹುಮಾನಗಳನ್ನು ಗಳಿಸುತ್ತಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net