ವೈಷಮ್ಯ ಮರೆತು ಸಂಭ್ರಮಿಸುವ ಹಬ್ಬ

Manvi Holi Celebration
ಮಾನ್ವಿ ಟಿಎಪಿಸಿಎಂಎಸ್ ಅವರಣದಲ್ಲಿ ಗಡಿಗೆ ಒಡೆಯುವ ಸ್ಪರ್ಧೆಗೆ ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ ಬುಧವಾರ ಚಾಲನೆ ನೀಡಿದರು.
Published on

ಮಾನ್ವಿ: ತಾಲೂಕಿನ ವಿವಿಧೆಡೆ ಯುವಕರು ಬುಧವಾರ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಮಂಗಳವಾರ ತಡರಾತ್ರಿ ಕಾಮದಹನ ಮಾಡಲಾಯಿತು.

ಪಟ್ಟಣದ ಟಿಎಪಿಸಿಎಂಎಸ್ ಮೈದಾನದಲ್ಲಿ ಓಕುಳಿ ಹಾಗೂ ಗಡಿಗೆ ಒಡೆಯುವ ಸ್ಪರ್ಧೆಗೆ ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ ಚಾಲನೆ ನೀಡಿದರು. ಹೋಳಿ ದುಷ್ಟ ಹಾಗೂ ಕೆಡಕು ಉಂಟು ಮಾಡುವ ಶಕ್ತಿಗಳ ಸಂಹಾರವನ್ನು ಸೂಚಿಸುತ್ತದೆ. ಹೋಳಿ ಕೇವಲ ಬಣ್ಣಗಳನ್ನು ಹಚ್ಚುವುದಕ್ಕೆ ಸೀಮಿತವಾಗದೆ ಎಲ್ಲ ವೈಷ್ಯಮ್ಯ ಮರೆತು ಕೂಡಿ ಸಂಭಮಿಸುವ ಹಬ್ಬವಾಗಿದೆ ಎಂದು ಹೇಳಿದರು. ರಾಜಸ್ತಾನಿ ಮೂಲದವರೊಂದಿಗೆ ಶಾಸಕ ರಾಜಾ ವೆಂಕಟಪ್ಪನಾಯಕ ಆಚರಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net