

ಮಾನ್ವಿ: ವಕೀಲರ ಪರಿಷತ್ತಿನ ಸದಸ್ಯ, ಹಿರಿಯ ವಕೀಲ ಸದಾಶಿವರೆಡ್ಡಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ವಕೀಲರ ಸಂಘದಿಂದ ಮೌನ ಪ್ರತಿಭಟನೆ ನಡೆಸಲಾಯಿತು.
ವಕೀಲರ ಸಂಘದ ಕಚೇರಿಯಿಂದ ತಹಸಿಲ್ ಕಚೇರಿವರೆಗೆ ರ‌್ಯಾಲಿ ನಡೆಸಿ, ಗ್ರೇಡ್ 2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಮನವಿ ಸಲ್ಲಿಸಲಾಯಿತು. ಕೇಸ್ ನೀಡುವ ನೆಪದಲ್ಲಿ ಏ.16 ರಂದು ಸದಾಶಿವ ರೆಡ್ಡಿ ಮನೆಗೆ ಹೋಗಿದ್ದ ಇಬ್ಬರು ವ್ಯಕ್ತಿಗಳು ಏಕಾಏಕಿ ಹಲ್ಲೆ ನಡೆಸಿದ್ದು, ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ್, ಪ್ರಧಾನ ಕಾರ್ಯದರ್ಶಿ ಚನ್ನಬಸವ ನಾಯಕ, ವಕೀಲರಾದ ಗುಮ್ಮ ಬಸವರಾಜ, ಚನ್ನನಗೌಡ, ಮೀರ್ ಲಿಯಾಕತ್ ಅಲಿ, ವಿಶ್ವನಾಥ ಪಾಟೀಲ್, ರಾಜಾ ರಂಗನಾಥ ನಾಯಕ, ಧೂಮಣ್ಣನಾಯಕ, ವೆಂಕಟೇಶನಾಯಕ, ಮಲ್ಲಿಕಾರ್ಜುನ ಮೇಕಾ, ಮೌನೇಶ ರಾಠೋಡ್, ಶರಣಬಸವ ಹರವಿ, ಉಮೇಶ ಬೆಟ್ಟದೂರು, ಯಲ್ಲಪ್ಪ ಬದರದಿನ್ನಿ, ಶಶಿಕಾಂತಯ್ಯ, ಶ್ರೀನಿವಾಸ ನಂದಿಹಾಳ, ಸುಭಾಷ್ ನಾಯಕ, ಚಂದ್ರಶೇಖರ ನಾಯ್ಕ ಇತರರಿದ್ದರು.