ಪ್ರತಿ ಪ್ರಾಣಿಗೆ ಬದುಕುವ ಹಕ್ಕಿದೆ- ಮೈಸೂರಿನ ಖ್ಯಾತ ಉರಗ ತಜ್ಞ ಸೂರ್ಯಕೀರ್ತಿ ಅನಿಸಿಕೆ

140223 Manvi Sanke Speciallist Suryakeerthi
ಮಾನ್ವಿ ಪಟ್ಟಣದ ಕಲ್ಮಠ ಶಾಲೆಯಲ್ಲಿ ಮಂಗಳವಾರ ಮೈಸೂರಿನ ಖ್ಯಾತ ಉರಗ ತಜ್ಞ ಸೂರ್ಯಕೀರ್ತಿ ಹಾವುಗಳ ಕುರಿತು ಉಪನ್ಯಾಸ ನೀಡಿದರು.
Published on

ಮಾನ್ವಿ: ಮನುಷ್ಯ ತನ್ನ ಷೋಕಿಗೆ ಇಂದು ಕಾಡು ನಾಶ ಮಾಡಿ ದೊಡ್ಡ ದೊಡ್ಡ ಕಟ್ಟಡ ನಿರ್ಮಿಸುತ್ತಿದ್ದುದರಿಂದ ಕಾಡುಪ್ರಾಣಿಗಳಿಗೆ ತೊಂದರೆಯಾಗುತ್ತಿದೆ ಎಂದು ಮೈಸೂರಿನ ಖ್ಯಾತ ಉರಗ ತಜ್ಞ ಸೂರ್ಯಕೀರ್ತಿ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ಕಲ್ಮಠ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಆಯೋಜಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ
ಮಾನವನ ಜೀವನದಲ್ಲಿ ಹಾವುಗಳ ಪಾತ್ರ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಪ್ರತಿ ಪ್ರಾಣಿಗೆ ಬದುಕುವ ಆಸೆ ಇರುತ್ತದೆ. ನಮಗೆ ಪ್ರಾಣಿಗಳ ಭಯವಾದರೆ ಪ್ರಾಣಿಗೆ ನಮ್ಮ ಭಯ ಇರುತ್ತದೆ. ಮಾನವರು ಪ್ರಕೃತಿ ಸಂಪತ್ತನ್ನು ನಾಶಮಾಡುತ್ತಿದ್ದು, ವನ್ಯಜೀವಿಗಳು ಆಹಾರ ಹುಡುಕಿಕೊಂಡು ಪಟ್ಟಣಕ್ಕೆ ಬರುತ್ತಿರುವುದರಿಂದ ಮಾನವ ಹಾಗೂ ವನ್ಯ ಪ್ರಾಣಿಗಳ ನಡುವೆ ಸಂಘರ್ಷ ಉಂಟಾಗಲು ಕಾರಣವಾಗಿದೆ. ವಿಶ್ವದಲ್ಲಿ 3 ಸಾವಿರ ಹಾವುಗಳ ಪ್ರಭೇದಗಳಿವೆ. ಅವುಗಳಲ್ಲಿ ಭಾರತದಲ್ಲಿ 275 ಪ್ರಭೇದಗಳು ಇದುವರೆಗೂ ಕಂಡುಬಂದಿದ್ದು ಇವುಗಳಲ್ಲಿ 4 ಪ್ರಭೇದಗಳು ಮಾತ್ರ ವಿಷಕಾರಿ ಹಾವುಗಳಿವೆ. ಪ್ರತಿ ವರ್ಷ ಹಾವು ಕಡಿತದಿಂದ 40 ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಹಾವುಗಳ ಬಗ್ಗೆ ಇರುವ ಮೂಢನಂಬಿಕೆ ತೊಡೆದುಹಾಕಬೇಕು. ವಿಷದ ಹಾವು ಕಚ್ಚಿದ 40 ನಿಮಿಷಗಳಲ್ಲಿ ಅಗತ್ಯ ಚಿಕಿತ್ಸೆ ದೊರೆತಲ್ಲಿ ಪ್ರಾಣಾಪಾಯದಿಂದ ಪಾರಾಗಬಹುದು. ಹಾವುಗಳು ಹಾಲು ಕುಡಿಯುವುದಿಲ್ಲ. ಹಾವುಗಳ ಮೆದುಳು ಸಣ್ಣದಿರುವುದರಿಂದ ನೆನಪಿನ ಶಕ್ತಿ ಕಡಿಮೆ ಇರುತ್ತದೆ ಆದ್ದರಿಂದ 12 ವರ್ಷಗಳವರೆಗೆ ದ್ವೇಷ ಸಾಧಿಸಲ್ಲ. ಹಾವುಗಳಿಗೆ ಕಿವಿಗಳು ಇರುವುದಿಲ್ಲ. ಅದ್ದರಿಂದ ಪುಂಗಿಯನ್ನು ಊದುವುದರಿಂದ ಹಾವುಗಳು ಬರುವುದಿಲ್ಲ. ನಾಗರ ಹಾವಿನ ತಲೆಯ ಮೇಲೆ ನಾಗಮಣಿ ಇರುವುದು ಸುಳ್ಳು. ತಮ್ಮ ದೈನಂದಿನ ಜೀವನದ ಕೆಲಸಗಳ ಜತೆಗೆ ಜನರಲ್ಲಿ ಹಾವಿನ ಬಗ್ಗೆ ಭಯ ಹೋಗಲಾಡಿಸಿ ಹಾವುಗಳನ್ನು ಸಂರಕ್ಷಿಸುವ ಹಾಗೂ ಜಾಗೃತಿ ಮೂಡಿಸುವ ಉರಗ ತಜ್ಞರನ್ನು ಸರಕಾರ ಗುರುತಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net