ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಮನವಿ

291222 Manvi AIDSO Protest
ಮಾನ್ವಿಯಲ್ಲಿ ಎಐಡಿಎಸ್‌ಒ ತಾಲೂಕು ಸಮಿತಿ ಉಪತಹಸೀಲ್ದಾರ್ ವಿರುಪಣ್ಣಾಗೆ ಎಐಡಿಎಸ್‌ಒ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು.
Published on

ಮಾನ್ವಿ: ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಗುರುವಾರ ಪಟ್ಟಣದ ಬಸವೃತ್ತದಿಂದ ತಹಸೀಲ್ ಕಚೇರಿವರೆಗೆ ಎಐಡಿಎಸ್‌ಒ ತಾಲೂಕ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನಾ ರ‌್ಯಾಲಿ ನಡೆಸಿ ಉಪತಹಸೀಲ್ದಾರ್ ವಿರುಪಣ್ಣಾಗೆ ಮನವಿ ಸಲ್ಲಿಸಿದರು.

ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿಜ್ಞಾನ ವಿಭಾಗ, ವಿದ್ಯಾರ್ಥಿ ವೇತನ, ಪ್ರೋತ್ಸಾಹಧನ, ಬಸ್ ಸೌಲಭ್ಯ, ವಸತಿ ನಿಲಯಗಳಿಗೆ ಸೌಕರ್ಯ ಒದಗಿಸುವುದೂ ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸವುಂತೆ ಒತ್ತಾಯಿಸಿದರು. ಎಐಡಿಎಸ್‌ಒ ತಾಲೂಕು ಸಂಚಾಲಕ ಸೈಯದ್ ಜೈದ್, ಪದಾಧಿಕಾರಿಗಳಾದ ಹೇಮಂತ್, ಸತ್ತಾರ್, ಮುದಾಸ್ಸೀರ್, ಗುಂಡಪ್ಪ, ಸಾಹಿಲ್ ಆದ್ನಾನ್, ರಕ್ಷಿತಾ, ಸೌಮ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net