ಕುಡಿವ ನೀರಿನ ಕೆರೆ ತುಂಬಿಸಲು ಸಚಿವ ಸೂಚನೆ

manvi lake view NS Bosaraju
ಮಾನ್ವಿ ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಸೋಮವಾರ ಸಚಿವ ಎನ್‌ಎಸ್ ಬೋಸರಾಜು ಕುಡಿಯುವ ನೀರಿನ ಕೆರೆ ವೀಕ್ಷಣೆ ಮಾಡಿದರು. ತಹಸೀಲ್ದಾರ್ ರಾಜು ಪಿರಂಗಿ, ಶಾಸಕ ಹಂಪಯ್ಯನಾಯಕ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಸಲೀಂಪಾಷಾ, ಮುಖಂಡರಾದ ಶಾಂತಪ್ಪ, ಜಯಣ್ಣ ರಾಯಚೂರು, ಬಾಲಸ್ವಾಮಿ ಕೊಡ್ಲಿ, ರೌಡುರು ಮಹಾಂತೇಶಸ್ವಾಮಿ, ಸುಖಮುನಿ, ತಾಪಂ ಇಓ ಖಾಲೀದ್ ಅಹಮ್ಮದ್, ಪುರಸಭೆ ಮುಖ್ಯಾಧಿಕಾರಿ ಗಂಗಾಧರ, ಪಿ.ಐ. ವೀರಭದ್ರಯ್ಯ ಹಿರೇಮಠ ಇನ್ನಿತರರು ಇದ್ದರು.
Published on

ಮಾನ್ವಿ: ಪಟ್ಟಣ ಜನತೆಗೆ ಕುಡಿವ ನೀರಿನ ತೊಂದರೆಯಾಗದಂತೆ ಕೆರೆಯನ್ನು ತುಂಬಿಸಿಕೊಳ್ಳುವಂತೆ ಪುರಸಭೆ ಸಿಒ ಗಂಗಾಧರಗೆ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್‌ಎಸ್ ಬೋಸರಾಜು ಸೂಚಿಸಿದರು.

ತಾಲೂಕಿನ ರಬ್ಬಣಕಲ್ ಗ್ರಾಮದಲ್ಲಿ ಸೋಮವಾರ ಕುಡಿವ ನೀರಿನ ಕೆರೆಯಲ್ಲಿ ನೀರಿನ ಸಾಮಥ್ಯ ವೀಕ್ಷಣೆ ಮಾಡಿ ಮಾತನಾಡಿದರು. ಪಟ್ಟಣದಲ್ಲಿ 50 ಸಾವಿರಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರು ಪೂರೈಸಲು ಕೆರೆ ನಿರ್ಮಾಣ ಮಾಡಲಾಗಿದೆ. 10 ಮೀಟರ್ ಸಂಗ್ರಹಣ ಸಾಮರ್ಥ್ಯವಿರುವ ಕೆರೆಯಲ್ಲಿ ನೀರಿನ ಮಟ್ಟ 2 ಮೀಟರ್ ಇದೆ. ಹೀಗೆ ಕಡಿಮೆಯಾದರೆ ನೀರಿನ ಕೊರತೆಯಾಲಿದೆ ಎಂದರು.

ತುಂಗಭದ್ರ ಜಲಾಶಯದಿಂದ ನ.21ರವರೆಗೆ ಕಾಲುವೆಗೆ ನೀರು ಬಿಡುತ್ತಿದ್ದು, ಅಷ್ಟರೊಳಗೆ ಕೆರೆ ತುಂಬಿಸಕೊಳ್ಳಬೇಕು. ಬೇಸಿಗೆಯಲ್ಲಿ ತೊಂದರೆಯಾಗಬಾರದು. ಕಾತರಕಿ ನದಿಯಿಂದ ಅಥಾವ ಕಾಲುವೆಯಿಂದ ನೀರನ್ನು ಕೆರೆಗೆ ತುಂಬಿಸಿ ಹಾಗೂ ಕೆರೆಯ ಸುತ್ತಮುಲ್ಲಿನ ಪ್ರದೇಶವನ್ನು ಸ್ವಚ್ಛವಾಗಿಡುವಂತೆ ಹೇಳಿದರು.

ತಹಸೀಲ್ದಾರ್ ರಾಜು ಪಿರಂಗಿ, ಶಾಸಕ ಹಂಪಯ್ಯನಾಯಕ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಸಲೀಂಪಾಷಾ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net