ಪ್ರವಚನಗಳಿಂದ ಶಾಂತಿ, ಸಹಬಾಳ್ವೆ- ಶಾಸಕ ರಾಜಾ ವೆಂಕಟಪ್ಪ ನಾಯಕ ಅಭಿಮತ

130223 Manvi Garige jatre Programmee
ಮಾನ್ವಿ ಕಲ್ಮಠದ ಧ್ಯಾನಮಂದಿರದಲ್ಲಿ ಗಾರಿಗೆ ಜಾತ್ರೆ ಕಾರ್ಯಕ್ರಮವನ್ನು ಶಾಸಕ ರಾಜಾ ವೆಂಕಟಪ್ಪನಾಯಕ ಭಾನುವಾರ ಉದ್ಘಾಟಿಸಿದರು.
Published on

ಮಾನ್ವಿ: ಜಾತಿ ಭೇದ ದೂರ ಮಾಡಿ ಸಮ ಸಮಾಜ ನಿರ್ಮಾಣಕ್ಕೆ ಶರಣರ, ಸಂತರ ತತ್ವಗಳು ಅವಶ್ಯವಾಗಿವೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು. ಪಟ್ಟಣದ ಕಲ್ಮಠದ ಧ್ಯಾನಮಂದಿರದಲ್ಲಿ ಮಹಾಶಿವರಾತ್ರಿ ಹಾಗೂ ಗುರು ವಿರೂಪಾಕ್ಷ ಸ್ವಾಮೀಜಿ ಪುಣ್ಯಸ್ಮರಣೆ ಮತ್ತು ಗಾರಿಗೆ ಜಾತ್ರಾ ಮಹೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಪ್ರವಚನಗಳಿಂದ ಎಲ್ಲರಲ್ಲಿ ಶಾಂತಿ, ಸಹಬಾಳ್ವೆ ಬರಲು ಸಾಧ್ಯ. ಅಲ್ಲದೆ ಸೌಹಾರ್ದ ಮೂಡುತ್ತದೆ ಎಂದರು.

ಸೇಡಂ ಕೊತ್ತಲ ಬಸವೇಶ್ವರ ಸಂಸ್ಥಾನ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ , ಹಿರಿಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾನು ಮತ್ತು ನನ್ನದು ಎನ್ನುವ ಮಾಯೆಯಿಂದ ಹೊರಬೇಕು ಎಂದು ಹೇಳಿದರು. ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸರಿಗಮಪ ಖ್ಯಾತಿಯ ಕಲಾವಿದ ಅರ್ಜುನ್ ಇಟಗಿ, ಪ್ರಭಾ ಕುಂಬಾರ, ದೇವರಾಜ ಯಲಿ ಭಕ್ತಿಗೀತೆಗಳನ್ನು ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net