ಜೋಳದ ಬಣವಿಗಳಿಗೆ ಬೆಂಕಿ

080422 Devipura Fire on Jawara Banavi
ದೇವಿಪುರದಲ್ಲಿ ಗುರುವಾರ ರಾತ್ರಿ ಹೊತ್ತಿ ಉರಿದ ಮೇವಿನ ಬಣವಿಗಳು.
Published on

ಮಾನ್ವಿ: ತಾಲೂಕಿನ ದೇವಿಪುರದಲ್ಲಿ ಗುರುವಾರ ತಡರಾತ್ರಿ ಬೆಂಕಿ ಆಕಸ್ಮಿಕದಿಂದ 300 ಎಕರೆಯಲ್ಲಿದ್ದ ಜೋಳದ ಬಣವಿಗಳು ಸುಟ್ಟು ಹೋಗಿದೆ. ಗೋಶಾಲೆಗಳಿಗೆಂದು ಈ ಬಣವಿಗಳಲ್ಲಿ ಮೇವು ಸಂಗ್ರಹಿಸಲಾಗಿತ್ತು. ಜಾನುವಾರುಗಳಿಗೆಂದು ರೈತ ಸುಬ್ಬಾರಾವ್‌ರೆಡ್ಡಿ ಮತ್ತು ನಾರಾಯಣಪ್ಪ ಸಂಗ್ರಹಿಸಿದ್ದ ಲಕ್ಷಾಂತರ ರೂ. ಮೌಲ್ಯದ ಮೇವು ಸಂಪೂರ್ಣವಾಗಿ ಸುಟ್ಟಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸಪಟ್ಟರೂ ಪ್ರಯೋಜನವಾಗಿಲ್ಲ. ಘಟನೆ ಕುರಿತಂತೆ ಕಂದಾಯ ಅಧಿಕಾರಿಗಳು ವರದಿ ಸಂಗ್ರಹಿಸಿದ್ದು ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net