ಹಾಡಹಗಲು 7 ಲಕ್ಷ ರೂ. ದೊಚಿ ಪರಾರಿ

15102022 manvi robary
Published on

ಮಾನ್ವಿ: ಪಟ್ಟಣದ ಬ್ಯಾಂಕ್ ಆಫ್ ಬರೋಡಾದಲ್ಲಿ ಹಾಡಹಗಲೇ ಗ್ರಾಹಕರೊಬ್ಬರ 7 ಲಕ್ಷ ರೂಪಾಯಿಯನ್ನು ಕಳ್ಳರು ಶನಿವಾರ ದೋಚಿ ಪರಾರಿಯಾಗಿದ್ದಾರೆ.

ಖಾಜಾ ಹುಸೇನ್ ಎಂಬುವವರು ಬ್ಯಾಂಕ್‌ನಲ್ಲಿ ಹಣ ಪಡೆದು ಹೊರಗೆ ಬಂದಾಗ ಒಬ್ಬ ಕಳ್ಳ ಕೆಳಗೆ ಪರ್ಸ್ ಬಿದ್ದಿದೆ ಎಂದು ಗಮನ ಸೆಳೆದಿದ್ದಾನೆ. ಕೆಳಗೆ ನೋಡುವಷ್ಟರಲ್ಲಿ ಕೈಯಲ್ಲಿದ್ದ ಹಣವನ್ನು ದೋಚಿ ಬೈಕ್ ಸ್ಟಾರ್ಟ್ ಮಾಡಿ ಕಾಯುತ್ತಿದ್ದ ಮತ್ತೊಬ್ಬನೊಂದಿಗೆ ಕಳ್ಳ ಪರಾರಿಯಾಗಿದ್ದಾನೆ.

ರಾಯಚೂರು ಕಡೆ ಹೊರಟ ಕಳ್ಳರನ್ನು ಬೆನ್ನತ್ತಿ ಹೋದಾಗ ಹಿರೇಹಳ್ಳ ಸಮೀಪ ಬೈಕ್ ಬಿಟ್ಟು ಓಡಿ ಹೋಗಿದ್ದಾರೆ. ಬೈಕ್ ನೋಂದಣಿ ಸಂಖ್ಯೆ ಕೆಎ 40 ವೈ 7998 ಇದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬ್ಯಾಂಕ್ ಆಫ್ ಬರೋಡಾದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಒಟ್ಟು 4 ಜನರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net