ದೌರ್ಜನ್ಯ ವಿರುದ್ಧ ಕ್ರಮವಾಗಲಿ

mnv
ಮಾನ್ವಿ ತಾಲೂಕು ಪಂಚಾಯಿತಿ ಮುಂಭಾಗ ಬುಧವಾರ ದಲಿತ ಸಂಘಟನೆಗಳ ಒಕ್ಕೂಟ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಒಕ್ಕೂಟದ ಸಂಚಾಲಕ ಶಿವಕುಮಾರ, ರಂಗಮ್ಮ, ಕಾಡಮ್ಮ, ನೀಲಮ್ಮ ಇತರರಿದ್ದರು.
Published on

ಮಾನ್ವಿ: ಅಸ್ಪಶ್ಯತೆ ನಿವಾರಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿ ವಿವಿಧ ಬೇಡಿಕೆಗಳು ಈಡೇರಿಸಲು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದ ತಾಲೂಕು ಪಂಚಾಯಿತಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿತು.

ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಶಿವಕುಮಾರ ಮಾತನಾಡಿ, ಪೋತ್ನಾಳ ಗ್ರಾಮದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ-14 ರಲ್ಲಿ ಬರುವ ಮುಸ್ಲಿಂ ಸಮುದಾಯದ ಸ್ಮಶಾನದಿಂದ ಲೊಯೋಲಾ ಆರೋಗ್ಯ ಕೇಂದ್ರದವರೆಗೆ ರಸ್ತೆಯ ಗಡಿಗಳನ್ನು ಗುರುತಿಸಬೇಕು.

ರಸ್ತೆ ನಿರ್ಮಾಣ ಕಾಮಗಾರಿ ಕಳಪೆಯಾಗಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಚಿಕ್ಕಕೋಟ್ನೆಕಲ್ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯಡಿಯಲ್ಲಿ ಅವ್ಯವಹಾರ ನಡೆದಿದೆ. ಚರಂಡಿಗಳನ್ನು ಸ್ವಚ್ಛಗೊಳಿಸಿ ಫಾಗಿಂಗ್ ಮಾಡಬೇಕು ಎಂದು ಆಗ್ರಹಿಸಿದರು.

ದಲಿತ ಸಂಘಟನೆಗಳ ಒಕ್ಕೂಟ ಪದಾಧಿಕಾರಿಗಳಾದ ಸದಾನಂದ, ಅಬ್ರಹಾಂ ಪನ್ನೂರು, ಬಸವರಾಜ ನಕ್ಕುಂದಿ, ಯಮನಪ್ಪ, ಪ್ರಸನ್ನ ಕುರ್ಡಿ, ಹುಸೇನಪ್ಪ ಜಗ್ಲಿ, ರವಿಕುಮಾರ ಮದ್ಲಾಪುರ್, ರಾಘವೇಂದ್ರ. ಮಿಕೆಲಪ್ಪ, ರವೀಂದ್ರ ಜಾನೇಕಲ್, ರಂಗಮ್ಮ, ಕಾಡಮ್ಮ, ನೀಲಮ್ಮ, ಮರಿಯಮ್ಮ, ಚಿನ್ನಮ್ಮ, ಮಾರೆಮ್ಮ, ಪುಷ್ಪಮ್ಮ, ದೇವಮ್ಮ, ಯಲ್ಲಮ್ಮ, ಅನಿತಾ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net