ವಿಳಂಬ ಧೋರಣೆ ಸಲ್ಲದು

Untitled design
ಮಾನ್ವಿ ಬಸವವೃತ್ತದಲ್ಲಿ ಗುರುವಾರ ಒಳಮೀಸಲಾತಿ ಜಾರಿಗಾಗಿ ಐಕ್ಯ ಹೊರಾಟ ಸಮಿತಿ ಯುವಕರು ಟೈರ್‌ಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಪಡಿಸಿದರು.
Published on

ಮಾನ್ವಿ : ನ್ಯಾಯಾಲಯದ ತೀರ್ಪಿನಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಒಳಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿ ಸದಸ್ಯ ಎ. ಬಾಲಸ್ವಾಮಿ ಕೊಡ್ಲಿ ಹೇಳಿದರು.

ಪಟ್ಟಣದ ಬಸವವೃತ್ತದಲ್ಲಿ ಗುರುವಾರ ಒಳಮೀಸಲಾತಿ ಜಾರಿಗಾಗಿ ಐಕ್ಯ ಹೊರಾಟ ಸಮಿತಿ ಹೋರಾಟದಲ್ಲಿ ಮಾತನಾಡಿದರು. ಸುಪ್ರಿಂಕೋರ್ಟ್‌ನ ಏಳು ಜನ ನ್ಯಾಯಧೀಶರ ಪೀಠ ರಾಜ್ಯಗಳಿಗೆ ಅಧಿಕಾರ ನೀಡಿ 2 ತಿಂಗಳು ಗತಿಸಿದರು ಸರ್ಕಾರ ಜಾರಿ ಮಾಡದೇ ವಿಳಂಬ ನೀತಿ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಒಳ ಮೀಸಲು ಜಾರಿಗೆ ಭರವಸೆ ನೀಡುತ್ತಿದೆ ಹೊರತು ಜಾರಿಗೆ ಮುಂದಾಗುತ್ತಿಲ್ಲ. ಅಕ್ಟೋಬರ್ ಒಳಗೆ ಮೀಸಲು ಜಾರಿಗೆ ಗಡುವು ನೀಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗದೇ ಮೊಂಡತನ ಮಾಡುತ್ತಿದೆ. ಮೀಸಲಾತಿ ಜಾರಿಯಾಗದಿದ್ದರೆ ಮುಂದೆ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಮುದಾಯದವರು ಮುಂದಾಗಬೇಕು ಎಂದು ತಿಳಿಸಿದರು.

ಯಶಸ್ವಿ ಃ ಒಳಮೀಸಲಾತಿ ಜಾರಿಗಾಗಿ ಐಕ್ಯ ಹೊರಾಟ ಸಮಿತಿ ಕರೆ ನೀಡಿದ್ದ ಮಾನ್ವಿ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಬೆಳಿಗ್ಗೆಯಿಂದ ಎಲ್ಲ ಅಂಗಡಿ ಮುಗ್ಗಟುಗಳು, ಬೀದಿ ವ್ಯಾಪಾರಸ್ಥರು, ವಾಹನ ಸಂಚಾರ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದರು.
ಬೆಂಬಲ: ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಜೆಡಿಎಸ್ ಪಕ್ಷದಿಂದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಭಾಗಿಯಾದರು. ಮುಸ್ಲಿಂ , ನಾಯಕ, ಯಾದವ ಸಮಾಜ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದವು.

ಒಳಮೀಸಲಾತಿ ಜಾರಿಗಾಗಿ ಐಕ್ಯ ಹೊರಾಟ ಸಮಿತಿ ಸಂಚಾಲಕ ಜಯಪ್ರಕಾಶ, ದಲಿತ ಹಿರಿಯ ಮುಖಂಡ ಚಂದ್ರಶೇಖರ ಕುರ್ಡಿ, ಸಿದ್ದರಾಮಪ್ಪ ನೀರಮಾನ್ವಿ, ವಸಂತ ಕೊಡ್ಲಿ, ಸುಂದರ ಕಪಗಲ್, ಹನುಮೇಶ ಮದ್ಲಾಪೂರು, ಮೂಕಪ್ಪ ಕಟ್ಟಿಮನಿ, ಅನಿಲ್‌ಕುಮಾರ, ಕಾಂಗ್ರೆಸ್ ಮುಖಂಡ ಖಾಲಿದ್‌ಖಾದ್ರಿ ಗುರು ನರಸಿಂಹ ನಾಯಕ ಕರಡ್ಡಿಗುಡ್ಡ, ಪ್ರಮುಖರಾದ ಪರಮೇಶ, ತಾಯಪ್ಪ ಹೂಸರು, ಮಲ್ಲೇಶ ಜಗ್ಲಿ, ಪ್ರಭುರಾಜ ಕೊಡ್ಲಿ, ಪ್ರವೀಣಕುಮಾರ, ಯಲ್ಲಪ್ಪ ಬಾದರದಿನ್ನಿ, ರವಿಕುಮಾರ, ಬಸವರಾಜ ನಕ್ಕುಂದಿ, ಹನುಮೇಶ ನಾಯಕ ಸದಾಪೂರು, ಹನುಮಂತ ಕೋಟೆ, ಮಾರೇಶ ಭಂಡಾರಿ, ಶರಣಬಸವ ಸೀಕಲ್, ಮಾರೆಪ್ಪ ದೊಡ್ಡಮನಿ, ಪರಶುರಾಮ ಬಾಗಲವಾಡ, ಇನ್ನಿತರ ಮಾದಿಗ ಸಮುದಾಯದ ಮುಖಂಡರು ಹೋರಾಟದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net