ಹತ್ತಿ ಹೊಲದಲ್ಲಿ ಗಾಂಜಾ ಬೆಳೆ

09092022 Manvi ganja crop
Published on

ಜಾಗೀರಪನ್ನೂರು ಗ್ರಾಮದಲ್ಲಿ ಅಬಕಾರಿ ಅಧಿಕಾರಿಗಳ ದಾಳಿ

ಮಾನ್ವಿ: ಜಾಗೀರಪನ್ನೂರು ಗ್ರಾಮದಲ್ಲಿ ಹತ್ತಿ ಬೆಳೆಯೊಂದಿಗೆ ಗಾಂಜಾ ಬೆಳೆದಿದ್ದ ಹೊಲದ ಮೇಲೆ ಅಬಕಾರಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದರು. 1.74 ಲಕ್ಷ ರೂ. ಮೌಲ್ಯದ ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಅಬಕಾರಿ ಡಿವೈಎಸ್ಪಿ ಹರಿಕೃಷ್ಣ ಹಾಗೂ ಮಾನ್ವಿ ವಲಯ ಅಧಿಕಾರಿ ಬಸವರಾಜ ನೇತೃತ್ವದ ತಂಡ 42 ಗಾಂಜಾ ಗಿಡಗಳು ಮತ್ತು ಹೊಲದಲ್ಲಿನ ಗುಡಿಸಿಲಿನಲ್ಲಿಟ್ಟಿದ್ದ 17.18 ಕೆಜಿ ಸಂಸ್ಕರಿಸಿದ ಗಾಂಜಾ ಜಪ್ತಿ ಮಾಡಿದ್ದಾರೆ. ಆರೋಪಿ ಹುಚ್ಚಪ್ಪ ವಿರುದ್ಧ ಪ್ರಕರಣ ದಾಖಲಿಸಕೊಳ್ಳಲಾಗಿದೆ. ಆರೋಪಿ ನಾಪತ್ತೆಯಾಗಿದ್ದಾನೆ. ಅಬಕಾರಿ ಅಧಿಕಾರಿಗಳಾದ ಬಸವರಾಜ ಕಾಕರಗಲ್, ಬಿ.ಕವಿತಾ, ನಾಗಣ್ಣ, ಶಿವಲಿಂಗಸ್ವಾಮಿ, ಈರಮ್ಮ, ಸಿಬ್ಬಂದಿ ಆಂಜನೇಯ, ವೆಂಕೋಬ, ನಿಂಗಪ್ಪ, ಶಿವಾನಂದ, ಮಹಿಬೂಬ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net