

ಮಾನ್ವಿ: ಕರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿ ಯುವಕರು ರಾಜ್ಯ ಹೆದ್ದಾರಿ ರಸ್ತೆಗೆ ಕರೊನಾ ಚಿತ್ರ ಬಿಡಿಸಿ ಎಲ್ಲಾರೂ ಮನೆಯಲ್ಲೇ ಇರುವಂತೆ ಜಾಗೃತಿ ಮೂಡಿಸಿದರು.
ಗ್ರಾಮದ ರೈತರು, ಕೂಲಿ ಕಾರ್ಮಿಕರು ಕರೊನಾ ಮಹಾಮಾರಿ ತಪ್ಪಿಸಲು ಲಾಕ್‌ಡೌನ್ ಆದೇಶವನ್ನು ಪಾಲಿಸಬೇಕು. ಕೈಗಳನ್ನು ಸ್ವಚ್ಛ ತೊಳೆದುಕೊಂಡು ಊಟ ಮಾಡಬೇಕು. ಕೈ ತೊಳೆಯದೇ ಊಟ ಮಾಡಬಾರದು. ಜನರಿಂದ ಅಂತರ ಕಾಯ್ದುಕೊಳ್ಳಬೇಕು, ಮಕ್ಕಳನ್ನು ಮನೆಯಿಂದ ಹೊರಗಡೆ ಬಿಡಬಾರದು ಎಂದು ಗ್ರಾಮದಲ್ಲಿ ಧ್ವನಿವಧರ್ಕ ಮೂಲಕ ಜಾಗೃತಿ ಮೂಡಿಸಿದರು. ಈ ಸಂದರ್ಭ ಕಲಾವಿದ ಮೆಹಬೂಬು, ವೆಂಕೊಬ ವಾಲೇಕಾರ್, ಯಲ್ಲಾಲಿಂಗ, ಸುನೀಲ್ ಹೂಗಾರ, ಮಲ್ಲಯ್ಯ, ಮಹೇಶ, ರಾಮಣ್ಣ, ಸಂಗಮೇಶ, ಎಂ. ಶಿವರಾಜ ಇತರರಿದ್ದರು.